ಬಚ್ಚಳ್ಳಿಯ ಬೆಳಕು

Author : ಎಂ.ಜಿ. ಚಂದ್ರಶೇಖರಯ್ಯ

Pages 264

₹ 150.00




Published by: ಗೋಧೂಳಿ ಪ್ರಕಾಶನ
Address: ಬೆಂಗಳೂರು
Phone: 9845096668

Synopsys

‘ಬಚ್ಚಳ್ಳಿಯ ಬೆಳಕು’ ಕೃತಿಯು ಧುರೀಣ ಜಿ. ರಾಮೇಗೌಡರ ಜೀವನ ಚರಿತ್ರೆಯ ಕೃತಿ. ಲೇಖಕ ಎಂ.ಜಿ.ಚಂದ್ರಶೇಖರಯ್ಯ ರಚಿಸಿದ್ದಾರೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ದೊಡ್ಡಬಳ್ಳಾಪುರದಿಂದ ನಂದಿಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ನಂದಿಮೋರಿ ದಾಟಿದರೆ, ಅಲ್ಲೆ ಎಡಕ್ಕೆ ರಸ್ತೆಯೊಂದು ತೆರೆದುಕೊಳ್ಳುತ್ತದೆ. ಆ ಚಿಕ್ಕ ರಸ್ತೆಯಲ್ಲಿ ವಡ್ಡರ ಪಾಳ್ಯ ದಾಟಿ ಹಾಗೆ ಮುಂದೆ ಸಾಗಿದರೆ, ಇದ್ದಕಿದ್ದಂತೆ ದಟ್ಟವಾದ ಮರಗಳ ನೆರಳು ಕವಿದ ಜಾಗವೊಂದು ಎದುರಾಗುತ್ತದೆ. ಬಿಸಿಲಲ್ಲಿ ಬಳಲಿ ಬಂದವರಿಗೆ ಒಂದರೆಗಳಿಗೆ ಅಲ್ಲೆ ವಿಶ್ರಮಿಸಿಕೊಳ್ಳುವ ಬಯಕೆ ಅನಪೇಕ್ಷಿತವಾಗಿ ಬಂದೂ ಬಿಡುತ್ತದೆ. ಹಾಗೆ ಎದುರಿಗೆ ಕಣ್ಣಾಡಿಸಿದರೆ ಆ ಮರದ ಪಕ್ಕದಲ್ಲೇ ಮೂಡಣ ದಿಕ್ಕಿಗೆ ಹಾದು ಹೋಗುವ ಸಾಧಾರಣ ಕಚ್ಚಾರಸ್ತೆಯೊಂದು ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಹೊಂಗೆ ಮರಗಳ ನೆರಳಲ್ಲಿ ನಿರುಮ್ಮಳ ಮಲಗಿರುವುದು ಕಾಣುತ್ತದೆ ಎನ್ನುತ್ತದೆ ಈ ಕೃತಿ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. ಒಮ್ಮೆ ಮಾಸ್ತಿ ಅವರು ಕಾರ್ಯಕ್ರಮವೊಂದರಲ್ಲಿ ರಾಮೇಗೌಡರ ವಿನಯ ಸಂಪನ್ನತೆ, ಪ್ರಾಮಾಣಿಕತೆಯ ಕುರಿತು ಹೇಳುತ್ತಾ ಅವರೊಬ್ಬ ದೇವರಂತ ಮನುಷ್ಯ ಎಂದಿದ್ದರಂತೆ. ಅದರಿದ ಪ್ರಭಾವಿತರಾದ ಚಂದ್ರಶೇಖರಯ್ಯ, ಸಾಕಷ್ಟು ಅಧ್ಯಯನ ನಡೆಸಿ, ಬರೆದಿರುವ ಕೃತಿ ಇದಾಗಿದ್ದು, ಒಂದು ಜೀವನ ಚರಿತ್ರೆಯನ್ನು ಹೇಳುತ್ತಲೇ, ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತಾರೆ. 

About the Author

ಎಂ.ಜಿ. ಚಂದ್ರಶೇಖರಯ್ಯ

ಅಧ್ಯಾಪಕ, ಲೇಖಕ ಎಂ.ಜಿ. ಚಂದ್ರಶೇಖರಯ್ಯ ಅವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ. ತಂದೆ ಆರ್. ಗುಡುದಯ್ಯ(ಶಿಕ್ಷಕರು), ತಾಯಿ ಎಂ.ರಂಗಮ್ಮ. ಮಲ್ಲಪ್ಪನಹಳ್ಳಿ, ಚಿತ್ರದುರ್ಗ, ಸಿದ್ಧಗಂಗೆ, ಸಿರಿಗೆರೆ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ 1981ರಿಂದ 2016ರ ವರೆಗೆ ಕನ್ನಡ ಅಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 2016 ರಿಂದ ಡಾ.ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದ‌ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸುದ್ದು, ‘ಬಸವಣ್ಣ - ಜೀವನ ಸಾಧನೆ’ ಮತ್ತು ‘ಬಚ್ಚಳ್ಳಿಯ ಬೆಳಕು’ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ‘ನಮ್ಮ ಕುವೆಂಪು’, ‘ಪ್ರಾಚೀನ ಕಾವ್ಯ ಸಂಗಮ’, ‘ಜೀವ ...

READ MORE

Related Books