ಕವಿ ಮಧುರ ಚೆನ್ನ ಹಾಗೂ ಜನಪದ ಸಾಹಿತಿ ಸಿಂಪೀ ಲಿಂಗಣ್ಣ ಅವರು ಬರೆದ ಕೃತಿ-ಕನ್ನಡಿಗರ ಕುಲಗುರು (ಶ್ರೀ ವಿದ್ಯಾರಣ್ಯರು). ವಿಜಯನಗರ ಮಹೋತ್ಸವ ಸ್ಮರಣಾರ್ಥ ಪ್ರಕಟಿಸಿದ ಈ ಕೃತಿಯ ಬೆಲೆ ಆರಾಣೆ (00;36 ಪೈಸೆ) . ಶ್ರೀ ವಿದ್ಯಾರಣ್ಯರ ಜೀವನ ಸಂದೇಶ ಹಾಗೂ ಸಿದ್ಧಾಂತಗಳ ಸವಿವರವೇ ಈ ಕೃತಿ. ಕನ್ನಡಿಗರ ಕುಲಗುರು, ಕರ್ನಾಟಕ ಸಿಂಹಾಸನಾ ಸ್ಥಾಪನಾಚಾರ್ಯ ಹಾಗೂ ಕನ್ನಡಿಗರ ಕುಲದೇವತೆ ಹೀಗೆ ಬೇರೆ ಬೇರೆಯಾದ ಸ್ವತಂತ್ರ ಪ್ರಬಂಧಗಳಿವೆ. ಕರ್ನಾಟಕ ಸಿಂಹಾಸನಾ ಸ್ಥಾಪನಾಚಾರ್ಯ ಪ್ರಬಂಧಕ್ಕೆ ಹಿರಿಯ ಸಾಹಿತಿ ಡಿ.ವಿ.ಗುಂಡಪ್ಪ ಅವರು ಸಾಮಗ್ರಿ ಒದಗಿಸಿದ್ದರೆ, ಉಳಿದೆರಡು ಪ್ರಬಂಧಗಳಿಗೆ ಶ್ರೀ ವಿದ್ಯಾರಣ್ಯ ಅವರ ವಚನಗಳನ್ನು ಅವರ ಗ್ರಂಥ ‘ಜೀವನ್ಮುಕ್ತಿ ವಿವೇಕ’ ದಿಂದ ಆಯ್ದುಕೊಳ್ಳಲಾಗಿದೆ ಎಂದು ಲೇಖಕರು ಸ್ಪಷ್ಟಪಡಿಸಿದ್ದಾರೆ. ದೇವರು, ದೈವ, ವಿಧಿ, ಕರ್ಮ, ಪ್ರಯತ್ನ, ಪುನರ್ಜನ್ಮ ಇತ್ಯಾದಿ ಪರಿಕಲ್ಪನೆಗಳ ಜಿಜ್ಞಾಸೆ ಮಾತ್ರವಲ್ಲ; ಆ ಮೂಲಕ ಸತ್ಯದ ವಿರಾಟ ಸ್ವರೂಪವನ್ನು ಕಾಣುವುದು ಶ್ರೀ ವಿದ್ಯಾರಣ್ಯರ ಉದ್ದೇಶವಾಗಿತ್ತು ಎಂಬುದನ್ನು ಲೇಖಕದ್ವಯರು (ಮಧುರಚೆನ್ನ ಹಾಗೂ ಸಿಂಪೀ ಲಿಂಗಣ್ಣ) ಹೇಳಿದ್ದಾರೆ.
ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...
READ MORE