ಬಹುಮುಖ ಪ್ರತಿಭೆಯ ಕುಮಾರ ವೆಂಕಣ್ಣ

Author : ಪರಂಜ್ಯೋತಿ (ಕೆ.ಪಿ. ಸ್ವಾಮಿ)

Pages 172

₹ 175.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸ್ಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಕುಮಾರ ವೆಂಕಣ್ಣ ಅವರು ಪತ್ರಕರ್ತ, ಸಾಹಿತಿ, ನೃತ್ಯ ಕಲಾವಿದರು, ಕಲಾ ವಿಮರ್ಶಕರು, ಕಾರ್ಮಿಕ ಸಂಘಟನಾಕಾರರು, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಅವರ ಬಹುಮುಖ ಪ್ರತಿಭೆಯ ಕುರಿತು ಲೇಖಕ ಪರಂಜ್ಯೋತಿ (ಕೆ.ಪಿ.ಸ್ವಾಮಿ) ಅವರು ಬರೆದ ಕೃತಿ ಇದು. ಕುಮಾರ ವೆಂಕಣ್ಣನವರು 12 ಕಾದಂಬರಿಗಳನ್ನು, 20- ಮಕ್ಕಳ ಪುಸ್ತಕಗಳನ್ನು ಹಾಗೂ 40-ಇತರ ಗ್ರಂಥಗಳನ್ನು ರಚಿಸಿದ್ದಾರೆ. ಇವರು ಮಕ್ಕಳಿಗಾಗಿ ರಚಿಸಿದ ಕಥೆಗಳು 1000ಕ್ಕೂ ಹೆಚ್ಚಿವೆ. 1954 ರಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿಯ ಸ್ಥಾಪಕ ಸದಸ್ಯರಾಗಿದ್ದರು. ಯಕ್ಷಗಾನದ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಹಿಂದೆ ಇದ್ದ ಕರ್ನಾಟಕ ನೃತ್ಯ ಕಲಾ ಪರಿಷತ್ತಿನ ಸದಸ್ಯರಾಗಿದ್ದರು. ಕರ್ನಾಟಕ ಜಾನಪದ ನೃತ್ಯದ ಬಗ್ಗೆ ಕೃತಿಗಳನ್ನು ಬರೆದಿದ್ದಾರೆ. ಭಾರತದ ಜಾನಪದ ನೃತ್ಯ ಪ್ರಕಾರಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು.

About the Author

ಪರಂಜ್ಯೋತಿ (ಕೆ.ಪಿ. ಸ್ವಾಮಿ)
(10 June 1936 - 04 July 2019)

ಪತ್ರಕರ್ತ, ಕಾದಂಬರಿಕಾರ, ಸಾಮಾಜಿಕ ಅಧ್ಯಯನಕಾರರಾಗಿರುವ ಪರಂಜ್ಯೋತಿ ಎಂತಲೇ ಪರಿಚಿತರಾಗಿರುವ ಕೆ.ಪಿ. ಸ್ವಾಮಿ ಅವರು ಜನಿಸಿದ್ದು 1936 ಜೂನ್ 10ರಂದು ಮಂಡ್ಯ ಜಿಲ್ಲಯ ಮಳವಳ್ಳಿಯಲ್ಲಿ. ತಂದೆ ರವಳ ಮೇಸ್ತ್ರಿ, ತಾಯಿ ಚೌಡಮ್ಮ. ಉದ್ಯೋಗ ಹರಸಿ ತಮಿಳುನಾಡಿನ ಕಡೆಗೆ ವಲಸೆಬಂದ ಇವರ ಕುಟುಂಬ ನೆಲೆಸಿದ್ದು ನೀಲಗಿರಿಯಲ್ಲಿ. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಪಡೆದರು. ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಇಂದ್ರ ಧನುಸ್, ಪ್ರಪಂಚ, ಸೋವಿಯೆಟ್ ಲ್ಯಾಂಡ್ ಮುಂತಾದ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದರು.  ಪರಂಜ್ಯೋತಿ ಅವರ ಪ್ರಮುಖ ಕೃತಿಗಳೆಂದರೆ ಒಲವು ಚೆಲುವಲ್ಲಿ, ಬದುಕು, ...

READ MORE

Related Books