ಕನ್ನಡ ರಂಗಭೂಮಿಯ ಶ್ರೀಮಂತ ಇತಿಹಾಸದ ಒಂದು ಪ್ರಮುಖ ಭಾಗವಾಗಿರುವ ಸದಾಶಿವರಾಯರ ಪುತ್ರರಾದ ಶ್ರೀಪಾದರಾಯರು ಸಹ ಮುಂದುವರಿಕೆಯಾಗಿದ್ದಾರೆ. ಎಂಬತ್ತೆರಡರ ಈ ವಯಸ್ಸಿನಲ್ಲಿಯೂ ಅಭಿನಯವನ್ನು ದೇವರಂತೆ ಪೂಜಿಸುತ್ತ ವೃತ್ತಿ ಹವ್ಯಾಸಿ ಎಂದು ಯಾವುದೇ ಭೇದ ಎಣಿಸದೇ ರಂಗಕರ್ಮವನ್ನು ಉಸಿರಾಗಿಸಿಕೊಂಡು ಬಾಳಿದ್ದಾರೆ. ಇವರ ಕುರಿತು ಪ್ರಸ್ತುತ ಕೃತಿಯು ಚಿತ್ರಣ ನೀಡುತ್ತದೆ.
ಕವಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಕೃತಿಗಳು: ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ...
READ MORE