ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 293ನೇ ಪುಸ್ತಕ ‘ಬೋಳೂರು ಹರಿಶ್ಚಂದ್ರ ಆಚಾರ್ಯ’. ಅವರು ವಿಶ್ವಬ್ರಾಹ್ಮಣ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಜಾಗೃತಿಗಾಗಿ ಶ್ರಮಿಸಿದವರಲ್ಲಿ ಪ್ರಮುಖರು. ಮಂಗಳೂರಿನಲ್ಲಿ ಶಿಕ್ಷಕರಾಗಿದ್ದು, ಕರಾವಳಿಯ ವಿಶ್ವಕರ್ಮರ ಉನ್ನತಿಗಾಗಿ ಶ್ರಮಿಸಿದ್ದಾರೆ. ಅವರ ಜೀವನ ಕುರಿತು ಲೇಖಕರು ಸಂಕ್ಷಿಪ್ತ ವಿವರ ನೀಡಿದ್ದಾರೆ.
ಲೇಖಕಿ ಲಲಿತಾ ಕೆ. ಆಚಾರ್ ಮೂಲತಃ ಮೈಸೂರಿನವರು. ಅವರು ಮೈಸೂರಿನಲ್ಲಿಯೇ ಕಲಿತು ಮಾನಸಗಂಗೋತ್ರಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1954ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಉಪನ್ಯಾಸಕರಾಗಿ ನೇಮಕಗೊಂಡು, 1990ರಲ್ಲಿ ಮಂಗಳೂರಿಗೆ ವರ್ಗವಾಗಿ ಮಂಗಳೂರಿನಲ್ಲಿ ಸೇವೆ ಸಲ್ಲಿಸಿದರು. ನಂತರ ಪ್ರಾಂಶುಪಾಲರಾಗಿ ಭಡ್ತಿ ಪಡೆದು ಈಗ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ಅನುರಕ್ತರಾಗಿರುವ ಅವರ 'ಸುಲಲಿತ ಪಾಕಗಳು' ಎಂಬ ಕೃತಿಯನ್ನು ರಚಿಸಿದ್ದಾರೆ. ...
READ MORE