‘ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮೀಜಿ’ ಕೃತಿಯು ಬಸವರಾಜ ಜಗಜಂಪಿ ಅವರ ಬರವಣಿಗೆಯ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಗಡಿಯಲ್ಲಿನ ಕನ್ನಡದ ಯೋಗಕ್ಷೇಮಕ್ಕಾಗಿ ಶ್ರೀಮಠ ಹಾಗೂ ಗಡಿ ಕನ್ನಡಿಗರ ಬಳಗ ರಾಜ್ಯೋತ್ಸವವನ್ನು ವಿಧಾಯಕವಾಗಿ ಆಚರಿಸುತ್ತ, ನಾಡಿನ ಹಿರಿಯ ಸಾಹಿತಿಗಳನ್ನು, ವಿದ್ವಾಂಸರನ್ನು ಬರಮಾಡಿಕೊಂಡು, ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ನಾವು ಮಾಡಬೇಕಾದ ಕರ್ತವ್ಯವನ್ನು ಕುರಿತು, ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲಿವೆ. ಅಕ್ಷರಲೋಕದ ಮೂಲಕವೂ ಕನ್ನಡ ಕೈಂಕರ್ಯ ಮಾಡುವ ಸದುದ್ದೇಶದಿಂದ ಶ್ರೀಮಠದ ಅಂಗಸಂಸ್ಥೆ ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಮೂಲಕ “ಕನ್ನಡ ಜಾಗೃತಿ ಪುಸ್ತಕ ಮಾಲೆ” ಪ್ರಾರಂಭಿಸಿ ಏಳು ಮೌಲಿಕ ಕನ್ನಡಪರ ಪುಸ್ತಕಗಳನ್ನು ಪ್ರಕಟಿಸಿದೆ. ಇದೀಗ ಎಂಟನೆಯ ಕೃತಿಯಾಗಿ “ಕನ್ನಡ ಕಾಯಕಯೋಗಿ ಡಾ. ಶಿವಬಸವ ಸ್ವಾಮೀಜಿ” ಓದುಗರ ಕೈಗಿಡುತ್ತಲಿದ್ದೇವೆ. ಡಾ. ಶಿವಬಸವ ಸ್ವಾಮೀಜಿ ಅವರು, ಬೆಳಗಾವಿಯನ್ನು ತಮ್ಮಕಾರ್ಯಕ್ಷೇತ್ರದ ಕೇಂದ್ರ ಸ್ಥಾನವಾಗಿಟ್ಟು ಕೊಂಡು, “ಮಾತು ಬೆಳ್ಳಿ ಮೌನ ಬಂಗಾರ”ವೆಂಬಂತೆ ಕೆಲಸ ಮಾಡಿದವರು. ಬೆಳಗಾವಿಯಲ್ಲಿನ ಕನ್ನಡಿಗರಿಗೆ ಅಭಿಮಾನ, ಆತ್ಮಸ್ಥೆರ್ಯ ತುಂಬಿ, ಕನ್ನಡದ ಜೀವಂತಿಕೆಗೆ ಪಾತ್ರರಾದವರು. ಕನ್ನಡದ ವಿದ್ವಾಸರು, ಕವಿಗಳು, ಸಾಹಿತಿಗಳು ಸಂಕಷ್ಟದಲ್ಲಿದ್ದಾಗ, ಅವರಿಗೆಲ್ಲ ಧನ ಧಾನ್ಯ ಕೊಟ್ಟು “ಅದೇನು ಬರಿತೀರೋ ಅದನ್ನೆಲ್ಲ ಒರೆಯಿರಿ" ಎಂದು ಹೆಳೆ ಶ್ರೀಮಠದಲ್ಲಿ ಆಶ್ರಯಕೊಟ್ಟು ಅವರಿಗೆಲ್ಲ ತಾಯಿಯಾದವರು, ಪೂಜ್ಯರ ನೂರು ವರ್ಷದ ಸಾರ್ಥಕ ಬದುಕಿನಲ್ಲಿ ಕನ್ನಡದ ಕೈಂಕರ್ಯ ಶ್ರಾವ್ಯವಾದುದು. ಅದೆಲ್ಲ ಈ ಗ್ರಂಥದಲ್ಲಿದೆ. ಈ ಗ್ರಂಥದ ಲೇಖಕರು ಡಾ. ಬಸವರಾಜ ಜಗಜಂಪಿ, ಸಾಹಿತ್ಯ ಕ್ಷೇತ್ರದ ಇವರ ಕಾರ್ಯ ನಾಡಿನುದ್ದಗಲಕ್ಕೂ ಹಬ್ಬಿದೆ. ಇವರು ಗರುಡ ಸದಾಶಿವರಾಯರ ಬಗೆಗಿನ ಪಿಎಚ್.ಡಿ. ಪ್ರಬಂಧ ಆಭ್ಯಾಸಿಗಳಿಗೆ ಆಕರ ಗ್ರಂಥ. ಜನಪದ ಹಾಡು, ನುಡಿ, ಒಗಟು, ವಡವು ಅವರ ಬಾಯಿಯಿಂದಲೇ ಕೇಳಬೇಕು. ಜನಪದವನ್ನು ಕುರಿತು ಅಧಿಕೃತವಾಗಿ ಹೇಳಬಲ್ಲರು, ಹಾಡಬಲ್ಲರು. ವಿಶೇಷವಾಗಿ ೧೦. ಶಿವಬಸವ ಸ್ವಾಮೀಜಿಯವರಲ್ಲಿ ತೀರ ಹತ್ತಿರದ ಸಂಬಂಧ ಇಟ್ಟುಕೊಂಡವರು. ಅವರಿಂದಲೇ ಈ ಗ್ರಂಥ ರಚನೆಯಾಗ ಬೇಕೆಂಬ ನಮ್ಮಬಯಕೆಯನ್ನು ಮನ್ನಿಸಿ ಬಹುಬೇಗನೆ ಶ್ರಮವಹಿಸಿ ಬರೆದುಕೊಟ್ಟಿದ್ದಾರೆ. ಅವರಿಗೆ ನಮ್ಮ ಅನಂತ ಕೃತಜ್ಞತೆಗಳು, ಈ ಗ್ರಂಥದ ದಾನಿಗಳು ಶ್ರೀ ಜಗದೀಶ ಮಲ್ಲಯ್ಯಸ್ವಾಮಿ ಕವಟಗಿಮಠ ಚಿಕ್ಕೋಡಿ, ಯುವ ವಯಸ್ಸಿನಲ್ಲಿಯೇ ಚಿಕ್ಕೋಡಿ ಪುರಸಭೆಯ ಅಧ್ಯಕ್ಷರಾಗಿ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದಿದೆ.
ಸಾಹಿತಿ ಬಸವರಾಜ ಜಗಜಂಪಿ ಅವರು 1950 ಮೇ 25ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಕಲ್ಲಪ್ಪನವರ, ತಾಯಿ ಈರವ್ವ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರರು. ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ,ಪ್ರಸ್ತುತ ಗ್ರಂಥಾಲಯ ಆಡಳಿತ ನಿರ್ದೇಶಕರಾಗಿ ಕೆ.ಎಲ್.ಇ. ಮಹಾವಿದ್ಯಾಲಯ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಚನ ಸಾಹಿತ್ಯ, ಜನಪದ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಪ್ರಮುಖ ಕೃತಿಗಳೆಂದರೆ ಕನ್ನಡ ಸಾಹಿತ್ಯ ಹಾಗೂ ಜೀವನ ಮೌಲ್ಯಗಳು, ಬಸವಪ್ರಭಪ್ಪನವರು ಹಂಪಣ್ಣವರ, ಮಲ್ಲಿಕಾರ್ಜುನ ದರ್ಶನ, ಕನ್ನಡ ಕಾಯಕಯೋಗಿ ಶಿವಬಸವ ಸ್ವಾಮಿಜಿ, ಕವಿ ಸಿದ್ದೇನಂಜೇಶ, ಕೆ.ಎಲ್.ಇ. ಸೊಸೈಟಿ, ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ, ಬೆಳಗಲಿ ಬಯಲ ಸಿರಿ, ರಸಾಯನ, ...
READ MORE