‘ಹುಟ್ಟಿದ ಹಳ್ಳಿ-ಹಳ್ಳಿಯ ಹಾಡು’ ಗ್ರಂಥದ ಮೂಲಕ ಚಿರಪರಿಚಿತರಾಗಿರುವ ಅರ್ಚಕ ಬಿ. ರಂಗಸ್ವಾಮಿ ಅವರು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರು. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲ್ಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಜನಿಸಿದ ಅರ್ಚಕ ಬಿ. ರಂಗಸ್ವಾಮಿ ಅವರ ಬದುಕು ಸಾಧನೆ ಕುರಿತು ಲೇಖಕ ಕ್ಯಾತನಹಳ್ಳಿ ರಾಮಣ್ಣ ಅವರು ಈ ಕೃತಿಯು ಸಂಕ್ಷಿಪ್ತವಾಗಿ ಚಿತ್ರಿಸಿದ್ದಾರೆ. ವಂಶಪಾರಂಪರ್‍ಯವಾಗಿ ಹೇಮಗಿರಿಯಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರಿಂದ ಇವರ ಹೆಸರಿನೊಂದಿಗೆ ಅರ್ಚಕ ಹೆಸರು ಸೇರಿಕೊಂಡಿದೆ ಎನ್ನುತ್ತಾರೆ. ಇಂತಹ ಹಲವಾರು ವಿಷಯಗಳು ಈ ಕೃತಿಯಲ್ಲಿವೆ.
ಜಾನಪದ ತಜ್ಞ, ಲೇಖಕ ಕ್ಯಾತನಹಳ್ಳಿ ರಾಮಣ್ಣ(1942) ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಕ್ಯಾತನಹಳ್ಳಿಯವರು. ತಂದೆ- ದಾಸೇಗೌಡ, ತಾಯಿ- ಮಾದಮ್ಮ. ಪ್ರಾಥಮಿಕ ಶಿಕ್ಷಣವನ್ನು ಕ್ಯಾತನಹಳ್ಳಿಯಲ್ಲಿ ಪಡೆದ ಅವರು ಪ್ರೌಢ ಶಿಕ್ಷಣ ಪಾಂಡವಪುರ ಹಾಗೂ ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿ ಬಿ.ಎ (1968) ಪದವಿ ಪಡೆದರು. ಮೈಸೂರು ಮಾನಸಗಂಗೋತ್ರಿಯಿಂದ ಕನ್ನಡ ಅಧ್ಯಯನ ಸಂಸ್ಥೆಯಿಂದ ಎಂ.ಎ(1971) ಪದವಿ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಬೋಧಕರಾಗಿ, ಸಂಶೋಧನ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಜಾನಪದ ವಿಹಾರ(ಸಂಪುಟ 1 1977), ಗೊಂದಲಿಗರು: ಒಂದು ಅಧ್ಯಯನ 1982 ...
READ MORE