ಮೂಕಿ ಚಲನಚಿತ್ರಗಳ ಆರಂಭದ ಕಾಲದಿಂದಲೂ ಒಂದು ಪೂರ್ಣ ಶತಮಾನ ಸಮೀಪಿಸುತ್ತಿದ್ದರೂ ಇಂದಿಗೂ ಮತ್ತೆ ಮುಂದೆಂದಿಗೂ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಲೇ ಇರುವ ಚಾರ್ಲಿ ಚಾಪ್ಲಿನ್ ಎಂಬ ನಟ, ನಮ್ಮೊಳಗಿನ ಜೀವನ ಪ್ರೀತಿ, ನೋವು-ಹಾಸ್ಯ-ಬೇಸರ-ಖಿನ್ನತೆ- ಎಲ್ಲವೂ ಆಗಿದ್ದಾನೆ. ಆಗುತ್ತಾನೆ. ಈತನ ಬಗೆಗೆ ನೂರೆಂಟು ಕೃತಿಗಳು ಬಂದಿದ್ದರೂ ಪ್ರತಿ ಕೃತಿಯಲ್ಲೂ ಲೇಖಕರು ಕಂಡಂತೆ ಓದುಗರಿಗೂ ಈ ಚಾಪ್ಲಿನ್ ಹೊಸದಾಗಿಯೇ ಕಾಣುತ್ತಾನೆ. ಈತ ಸಿನೆಮಾ ಲೋಕದ ಸಾಮ್ರಾಟನೇ ಸರಿ. ಈ ಕೃತಿಯು ಉತ್ತಮ ನಿರೂಪಣಾ ಶೈಲಿಯಿಂದ, ಕೆಲ ಅಚ್ಚರಿಯ ಮಾಹಿತಿಯಿಂದ ಗಮನ ಸೆಳೆಯುತ್ತದೆ.
ಸಂತೋಷ ಭದ್ರಾವತಿ-ಸಾಹಿತಿ-ಪತ್ರಕರ್ತರು. ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಹೊಸ ದಿಗಂತ ಹಾಗೂ ಖಾಸಗಿ ವಾಹಿನಿಗಳಲ್ಲಿ ವಿವೀದ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದು, ಪ್ರಸ್ತುತ ವಿಶ್ವವಾಣಿ ಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರು. ಚಿನ್ನಿದಾಂಡು ಬುಗುರಿ-ಇವರ ಮೊದಲ ಮಕ್ಕಳ ಕವನ ಸಂಕಲನ ಹಾಗೂ ಸಿನಿಮಾ ಲೋಕದ ಸಾಮ್ರಾಟ- ಇವರ ಎರಡನೇ ಕೃತಿ. ...
READ MORE