ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ಬರೆದ ಕೃತಿ-ಸವ್ಯ ಸಾಚಿ ಪಂಪ. 10ನೇ ಶತಮಾನದ ಚಾರಿತ್ರಿಕ ಅಂಶಗಳು ಪಂಪನ ಜೀವನದೊಂದಿಗೆ ಬೆರೆತಿವೆ. ಶಾಸನಗಳು ಮಾತ್ರವಲ್ಲ; ಐತಿಹಾಸಿಕವಾಗಿ ಸಾಧ್ಯವಿದ್ದ ಎಲ್ಲವುಗಳ ನೆರವು ಪಡೆದು ಪಂಪನ ಭವ್ಯ ವ್ಯಕ್ತಿತ್ವದ ದಿವ್ಯ ದರ್ಶನವನ್ನು ನೀಡಲಾಗಿದೆ. ಒಂದರ್ಥದಲ್ಲಿ ಈ ಕೃತಿಯು ಪಂಪನ ಇಡೀ ಜೀವನ, ಸಾಹಿತ್ಯಕ, ಹಾಗೂ ಬದುಕಿನ ಮೌಲ್ಯಗಳನ್ನು ನಿರ್ಧರಿಸಿದ ಸಮಗ್ರ ಅಂಶಗಳನ್ನು ನೀಡುತ್ತದೆ. 1997ಕ್ಕೆ ಈ ಕೃತಿಯು 4ನೇ ಮುದ್ರಣ ಕಂಡಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಹಂ.ಪ. ನಾಗರಾಜಯ್ಯ ಅವರು ಕನ್ನಡದ ಪ್ರಮುಖ ಭಾಷಾ ವಿಜ್ಞಾನಿ, ಸಂಶೋಧಕ. ’ಹಂಪನಾ’ ಕಾವ್ಯನಾಮದಿಂದ ಬರೆಯುವ ನಾಗರಾಜಯ್ಯ ಅವರು ಮೂಲತಃ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರದವರು. ಸದ್ಯ ಬೆಂಗಳೂರು ನಗರದ ನಿವಾಸಿ. ತಂದೆ ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ. ಪ್ರಾಥಮಿಕ, ಆರಂಭಿಕ ಶಿಕ್ಷಣವನ್ನು ಗೌರಿಬಿದನೂರು, ಮಧುಗಿರಿಯಲ್ಲಿ ಪಡೆದ ಅವರು ತುಮಕೂರಿನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ ಪಡೆದ ನಾಗರಾಜಯ್ಯ ಅವರು ವಡ್ಡಾರಾಧನೆ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ...
READ MORE