ಒಕ್ಕಲಿಗ ಸಾಧಕರು ಸರಣಿಲ್ಲಿ ಲೇಖಕ ಎಂ.ಎಚ್.ನಾಗರಾಜು ಅವರು ರಚಿಸಿರುವ ಕೃತಿ ಧರ್ಮಪ್ರಕಾಶ ಡಿ.ಬನುಮಯ್ಯ. ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ, ಧರ್ಮಪ್ರಕಾಶ ಡಿ. ಬನುಮಯ್ಯನವರು ಇಪ್ಪತ್ತನೇ ಶತಮಾನದ ಪೂರ್ವಾರ್ಧದ ಮೈಸೂರು ಸಂಸ್ಥಾನದ ಆಡತದಲ್ಲಿ ಅತ್ಯಂತ ಪ್ರಭಾವಶಾಲ ವ್ಯಕ್ತಿಯಾಗಿದ್ದವರು, ಅವರು ಶೂನ್ಯದಿಂದ ಮೂಲಲೆತ್ತರಕ್ಕೆ ಬೆಳೆದ ಕುಟುಂಬದಿಂದ ಬಂದವರು, ಬಡತನ, ಸಿಂತನ ಎರಡನ್ನೂ ಕಂಡವರಾದ್ದರಿಂದ ಯಾವತ್ತೂ ಅತಿಯಾಸ ಮತ್ತು ಅಹಂಕಾರವನ್ನು ಹತ್ತಿರ ಸುಳಿಯಗೊಡಲಿಲ್ಲ. ವ್ಯಾಪಾರ, ಉದ್ದಿಮೆ, ಬ್ಯಾಂಕ್, ಶಿಕ್ಷಣ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಬನಮಯ್ಯನವರು ರಾಜಕೀಯ ಮತ್ತು ಸಾಮಾಜಿಕ ಚಳವಆಯಲ್ಲೂ ತಮ್ಮನ್ನು ತೊಡಗಿಸಿ ಕೊಂಡವರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಹಿಂದುಳಿದವರ ಅಭ್ಯುದಯಕ್ಕಾಗಿ ದುಡಿದರು. ಮೈಸೂರು ಮಹಾರಾಜರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅವರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ಆಗಿದ್ದರು. ಸ್ವಸಾಮರ್ಥ್ಯದಿಂದ ಸಮಾಜದ ಪ್ರಮುಖವ್ಯಕ್ತಿಯಾಗಿ ತಮ್ಮನ್ನು ತಾವೇ ರೂಪಿಸಿಕೊಂಡಿದ್ದ ಬನುಮಯ್ಯನವರು ಮಹಾಸ್ವಾಭಿಮಾನಿ ಕೂಡ. ಕುಟುಂಬಜೀವಿಯಾಗಿದ್ದ ಅವರು ತಮ್ಮ ದಾನಗುಣ, ಪರೋಪಕಾರ, ಸಮಾಜಮುಖ ಚಟುವಟಿಕೆಯಿಂದ ‘ಧರ್ಮಪ್ರಕಾಶ' ಬಿರುದಿಗೆ ಪಾತ್ರರಾದರು. ಈ ಮಹನೀಯರ ಜೀವನ ಸಾಧನೆ ಕುರಿತು ಇತಿಹಾಸಕಾರ, ಲೇಖಕ ಎಂ. ಎಚ್. ನಾಗರಾಜ್ ಅವರು 'ಧರ್ಮಪ್ರಕಾಶ ಡಿ. ಬನುಮಯ್ಯ' ಕೃತಿಯನ್ನು ಅತ್ಯಂತ ಸುಂದರವಾಗಿ ರಚಿಸಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಶ್ರೀಸಾಮಾನ್ಯನ ನಾಯಕತ್ವದ ಉದಯಕಾಲ, ಮಧುಗಿರಿಯಿಂದ ಮೈಸೂರಿಗೆ, ಸಂತೆಪೇಟೆಯಲ್ಲಿ ಅರಿಳಿದ ಬದುಕು, ಯಶಸ್ವಿ ವಾಣಿಜ್ಯೋದ್ಯಮಿ, ಸೇವೆಗೆ ಒಲಿದ ಮನ, ಕೈಗಾರಿಕೆಗಳ ಸ್ಥಾಪನೆ, ಬ್ಯಾಂಕುಗಳ ಸಂಸ್ಥಾಪನೆ, ಶಿಕ್ಷಣ ಪ್ರಸಾರ ಕಾರ್ಯ, ದೈಹಿಕ ಶಿಕ್ಷಣದ ಕಾಳಜಿ, ಆರೋಗ್ಯ ಮತ್ತಿತರೆ ಕ್ಷೇತ್ರ, ಪಶುಪಕ್ಷಿ ಪ್ರೀತಿ, ದೇವರು ಧರ್ಮ-ಒಲವು ನಿಲವು ಸೇರಿದಂತೆ 27 ಶೀರ್ಷಿಕೆಗಳ ಬರಹಗಳಿವೆ.
ಎಂ. ಎಚ್. ನಾಗರಾಜು ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮರಳೇನಹಳ್ಳಿಯವರು. ಮರಳೇನಹಳ್ಳಿ, ದೊಡ್ಡಬಳ್ಳಾಪುರ, ಬೆಂಗಳೂರುಗಳಲ್ಲಿ ಶಿಕ್ಷಣ ಪೂರೈಸಿ, ರಾಜ್ಯದ ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸದ್ಯ ನಿವೃತ್ತರು. ತುಮಕೂರಲ್ಲಿ ವಾಸವಾಗಿದ್ದಾರೆ. ಏಕಕಾಲದಲ್ಲಿ ಇತಿಹಾಸ-ಸಾಹಿತ್ಯ ಸಮ್ಮಿಲನ, ಜೊತೆಯಲ್ಲಿ ಗಾಂಧಿ, ಅಂಬೇಡ್ಕರ್, ಬಸವ, ಬುದ್ಧರ ಚಿಂತನೆಗಳನ್ನು ಸಮಗ್ರೀಕರಿಸಿದ ರೀತಿಯಲ್ಲಿ ಇವರ ಬರಹಗಳಿವೆ. ಕೃತಿಗಳು : ಒಕ್ಕಲಿಗರು ಮತ್ತು ಪರಭೇದಗಳು, ಕುಂಚಿಟಿಗರ ಒಕ್ಕಲಿಗರವಲ್ಲವೇ?’, ಮರೆಯಲಾಗದ ಮಾಲಿಮರಿಯಪ್ಪ, ‘ಸಾಧನೆಯ ಹಾದಿಯಲ್ಲಿ ಬಿ.ರಂಗಣ್ಣ’, ‘ಫೌಜುದಾರ್ ಬೋರೇಗೌಡ, ‘ಗುಬ್ಬಿಹೊಸಹಳ್ಳಿ ಪ್ರಭುಗಳು, ‘ಧರ್ಮಪ್ರಕಾಶನ ಡಿ. ಬನುಮಯ್ಯ’, ‘ಸಾಮಾಜಿಕ ಹೋರಾಟಗಾರ W.H ಹನುಮಂತಪ್ಪ ...
READ MORE