ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಮಹಾಮಾನವ ಬುದ್ಧ. ಪುರೋಹಿತಶಾಹಿ ವ್ಯವಸ್ಥೆಯು ದೇವರ ಹೆಸರಿನಲ್ಲಿ ಸದ್ದಿಲ್ಲದೇ ರೂಢಿಸಿಕೊಂಡು ಬಂದಿದ್ದ ಶೋಷಣಾ ಕ್ರಮವನ್ನು ಮುರಿದವರ ಪೈಕಿ ಭಗವಾನ್ ಬುದ್ಧ ಮೊದಲಿಗರು. ಈ ಶೋಷಣೆಯಿಂದ ಎಚ್ಚರವಾಗಿರಲು ಬುದ್ಧನು ಕೆಲ ಸಲಹೆಗಳನ್ನು ನೀಡಿದ್ದರ ಪೈಕಿ ‘ನಿಮಗೆ ಸರಿ ಎನ್ನಿಸುವವರೆಗೂ ಯಾರ ಮಾತನ್ನು ಕೇಳಬಾರದು’ ಎಂಬುದೂ ಒಂದು. ಒಂದು ಕಡೆ ಶೋಷಣೆಯನ್ನು ತಪ್ಪಿಸುವುದು, ವ್ಯಕ್ತಿಗತವಾಗಿ ವೈಚಾರಿಕ ಉನ್ನತಿಯನ್ನು ಪಡೆಯುವುದು ಮತ್ತೊಂದು ಕಡೆ. ಇಂತಹ ಸಂದಿಗ್ಧತೆಯಿಂದ ಜನಸಾಮಾನ್ಯರನ್ನು ಪಾರು ಮಾಡುವುದು ಸಮಸ್ಯೆಯಾಗಿತ್ತು. ಇಂತಹ ಸಮಸ್ಯೆಗಳ ಸವಾಲನ್ನು ಸ್ವೀಕರಿಸಿ ಎದುರಿಸಿದ ಬುದ್ಧನ ಹೋರಾಟ-ಚಳವಳಿ, ವೈಚಾರಿಕ ಪ್ರಖರತೆಗಳನ್ನು ಇಲ್ಲಿ ಲೇಖಕರು ಕೃತಿಯಲ್ಲಿ ಕಾಣಿಸಿದ್ದಾರೆ.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE