`ಅದಮ್ಯ' ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ವಾಸುದೇವ ಬಲವಂಥ ಫಡಕೆ ಅವರು ಕುರಿತ ಜೀವನಚರಿತ್ರೆಯ ಕೃತಿ. ಲೇಖಕ ಬಾಬು ಕೃಷ್ಣಮೂರ್ತಿ ರಚಿಸಿದ್ದಾರೆ. ಎದೆಯಲ್ಲಿ ಕ್ರಾಂತಿ ಜ್ವಾಲೆಯ ಅಂಕುರ, ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಉಗ್ರ ಪ್ರತಿಭಟನೆಗಳ ಸರಣಿ ಆಸ್ಫೋಟ, ಅನಿರೀಕ್ಷಿತ ಬಂಧನ, ಏಡನ್ ಕಾರಾಗೃಹದಲ್ಲಿ ಖೈದಿಯಾಗಿ ಜೀವನ, ತನ್ನ ಪ್ರಾಣಪ್ರಿಯ ತಾಯ್ನಾಡಿನ ಸೇವೆಯ ಹಂಬಲದ ಹಾದಿಯಲ್ಲೆ ಆತ್ಮಾಹುತಿ ಅಧ್ಯಾಯಗಳಿವೆ. ಫಡಕೆ ಅವರು ಅಸುನೀಗಿ ಒಂದು ನೂರು ವರ್ಷವಾದ ಸಂದರ್ಭದಲ್ಲಿ ಪ್ರಕಟಿತ ಗ್ರಂಥ ಇದು.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...
READ MORE