ಖ್ಯಾತ ಸಾಹಿತಿ ಎನ್ಕೆ (ಎನ್.ಕೆ. ಕುಲಕರ್ಣಿ) ಅವರು ನಿರೂಪಿಸಿದ ಕೃತಿ ಇದು. ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಹುಟ್ಟಿದ್ದರೂ ಧಾರವಾಡದಲ್ಲಿ ಬೆಳೆದ ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ್ತೀ. ಮೊದಮೊದಲು ಅವಮಾನಗಳನ್ನೇ ಪಡೆದ ಗಂಗೂಬಾಯಿ ಹಾನಗಲ್ ಅವರು ಹಠ ಬಿಡದೇ ಸಂಗೀತದಲ್ಲಿ ಸಾಧನೆ ಮಾಡಿ, ಬದುಕಿನಲ್ಲಿ ಛಲದಿಂದ ಹೇಗೆ ಗುರಿ ಸಾಧಿಸಬೇಕು ಎನ್ನುವುದಕ್ಕೆ ಇವರ ಬದುಕು ಒಂದು ಮಾದರಿ. ಬೆಳಗಾವಿಯಲ್ಲಿ (1924) 24ನೇ ಕಾಂಗ್ರೆಸ್ ಅಧಿವೇಶನ ನಡೆದಾಗ ‘ ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ’ ಎಂಬ ಸ್ವಾಗತ ಗೀತೆ ಹಾಡಿ ಮಹಾತ್ಮ ಗಾಂಧೀಜಿಯವರ ಮನ ಗೆದ್ದಿದ್ದರು. ಅಮೆರಿಕ, ಫ್ರಾನ್ಸ್ ನೇಪಾಳ, ಪಾಕಿಸ್ತಾನ, ಕೆನಡಾ, ಜರ್ಮನಿ ಹೀಗೆ ವಿವಿಧ ದೇಶಗಳಲ್ಲಿ ಸಂಗೀತ ಕಚೇರಿ ನೀಡಿ ವಿಶ್ವವ್ಯಾಪಿ ಪ್ರಸಿದ್ಧರಾದರು. ಕರ್ನಾಟಕ ವಿ.ವಿ, ಹಂಪಿಯ ಕನ್ನಡ ವಿ.ವಿ. ಗುಲಬರ್ಗಾ ವಿ.ವಿ. ದೆಹಲಿ ವಿವಿ ಹೀಗೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್ ದೊರೆತಿದೆ. ಬನಾರಸದಲ್ಲಿ ಭಾರತೀಕಂಠ ಬಿರುದು ಪ್ರಯಾಗದಲ್ಲಿ ಸ್ವರಶಿರೋಮಣಿ ಬಿರುದು, ಗಾಯನ ಸಮಾಜ, ಬೆಂಗಳೂರು ನೀಡಿದ ಸಂಗೀತ ಕಲಾರತ್ನ ಬಿರುದು, ತ್ಯಾಗರಾಜ ಉತ್ಸವ ಸಮಿತಿ, ತಿರುಪತಿ ನೀಡಿದ ಸಪ್ತಗಿರಿ ಸಂಗೀತ ವಿದ್ವನ್ಮಣಿ ಬಿರುದು ಹೀಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಗೌರವಗಳು ದೊರೆತಿವೆ. ಗಂಗೂಬಾಯಿ ಹಾನಗಲ್ ಅವರ ಆತ್ಮಕಥೆಯನ್ನು ಲೇಖಕ ಎನ್ಕೆ ಅವರು ನಿರೂಪಿಸಿದ ಕೃತಿ ಇದು.
ಎನ್ಕೆ (ಎನ್.ಕೆ. ಕುಲಕರ್ಣಿ) ಅವರು ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, 1913 ರ ಆಗಸ್ಟ್ 29 ರಂದು ಗದುಗಿನಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ .(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.1938 ರಲ್ಲಿ ಕನ್ನಡ ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. 1940 ರಲ್ಲಿ ಬಿ.ಟಿ. ಪದವಿ ಪಡೆದರು. 1943 ರಿಂದ 1946 ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. 1971 ರಲ್ಲಿ ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ಸಾವಿನ ಉಡಿಯಲ್ಲಿ, ಎರಡನೆಯ ...
READ MORE