‘ಕನ್ನಡ ಜಗದ್ಗುರು’ ಕೃತಿಯು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮೀಜಿ ಕುರಿತು ಲೇಖಕ ಚಂದ್ರಶೇಖರ ವಸ್ತ್ರದ ಅವರ ಕೃತಿ. ಈ ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಡಾ.ಗುರುಲಿಂಗ ಕಾಪಸೆ, ಧಾರವಾಡದಲ್ಲಿ ಪ್ರಾರಂಭವಾಗಿ, ಕನ್ನಡ ನಾಡಿನ ಉದ್ದಗಲಕ್ಕೂ ವ್ಯಾಪಿಸಿದ ಕನ್ನಡ ಭಾಷಾ ಚಳವಳಿ ಗೋಕಾಕ ಚಳವಳಿ) ಒಂದು ಅನನ್ಯವಾದ ಕನ್ನಡದ ಹೋರಾಟ. ಕರ್ನಾಟಕ ಏಕೀಕರಣ ಚಳವಳಿಯ ನಂತರ ಇಡೀ ನಾಡನ್ನು ಜಾಗೃತಗೊಳಿಸಿದ ಹೋರಾಟವೂ ಅಹುದು. ಹೋರಾಟದಲ್ಲಿ ಪಾಲ್ಗೊಂಡವರು ಕವಿಗಳು, ಅಧ್ಯಾಪಕರು, ಪತ್ರಕರ್ತರು, ವಿದ್ಯಾರ್ಥಿಗಳು, ಶ್ರೀಸಾಮಾನ್ಯರು, ಮಹಿಳೆಯರು -ಎಲ್ಲರು, . ಇದೊಂದು ಮಹತ್ವದ ಇತಿಹಾಸ, ಈ ಇತಿಹಾಸದ ಒಂದು ಅಧ್ಯಾಯವಾದವರು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳು. ಅವರು ತೊಟ್ಟ ಕಾವಿ ಬಟ್ಟೆ ಕನ್ನಡದ ಬಾಳ ಬಟ್ಟೆಯಾಗಿತ್ತು. ಅವರು ಹಿಡಿದ ಕೋಲಿನಲ್ಲಿ ಕನ್ನಡದ ಕೆಚ್ಚಿತ್ತು. ಅವರು ಮಾತಾಡುವ ನಾಲಗೆಯಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ರಸಘಟ್ಟಿಯಿತ್ತು. ಕಣ್ಣಲ್ಲಿ ಕನ್ನಡದ ಅಸಾಧಾರಣ ಹೊಳಪಿತ್ತು. ಅವರ ಇಡುವ ಒಂದು ಹೆಜ್ಜೆಯಲ್ಲಿ ಕನ್ನಡದ ಧೀರೋದಾತ್ತ ಸ್ಪಂದನವಿತ್ತು. ಅವರ ಚಿಂತನೆಯಲ್ಲಿ ಕನ್ನಡ ಸಮಗ್ರ ನೆಲ-ಜಲಗಳ ಹಿರಿಮೆ-ಗರಿಮೆಗಳಿದ್ದವು; ಭೂತ-ವರ್ತಮಾನ-ಭವಿಷ್ಯತ್ತುಗಳ ಮಿಂಚಿನ ತರಂಗ’ ಎಂದಿದೆ.
ಚಂದ್ರಶೇಖರ ವಸ್ತ್ರದ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನವರು. ವಿವಿಧ ವಿಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ವಲಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಕರ್ನಾಟಕ ಚಲನಚಿತ್ರ ಮಂಡಳಿ-ಗದಗ ಜಿಲ್ಲಾ ’ಬೆಳ್ಳಿ ಸಾಕ್ಷಿ’ ತಂಡದ ಜಿಲ್ಲಾ ಸದಸ್ಯ, ಕರ್ನಾಟಕ ಗಮಕ ಕಲಾ ಪರಿಷತ್ತಿನಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಮಾನವತಾವಾದಿ ಬಸವಣ್ಣನವರು, ಕುಲಕ್ಕೆ ತಿಲಕ ಮಾದಾರ ಚನ್ನಯ್ಯ, ಬೆಳಗು, ಹರಿದಾವ ನೆನಪು, ಮಭನದ ಮಾತುಗಳು, ಪ್ರೀತಿ ...
READ MORE