40 ವರ್ಷ ಕಾಲ ಪತ್ರಿಕೋದ್ಯಮದಲ್ಲಿ ಏಗಿ, ಮಾಗಿ, ಇಡೀ ದೇಶದ ರಾಜಕೀಯ ರಂಗ ಮತ್ತು ಮಾಧ್ಯಮ ವಲಯ ತನ್ನತ್ತ ತಿರುಗಿ ನೋಡುವಂತೆ ಮಾಡಿದವರು ವಿನೋದ್ ಮೆಹ್ತಾ. ಮೂರು ಇಂಗ್ಲಿಷ್ ಪತ್ರಿಕೆಗಳನ್ನು ಕಟ್ಟಿ ಬೆಳೆಸಿದವರು. ಎರಡು ಪತ್ರಿಕೆಗಳಿಗೆ ಹೊಸ ರೂಪ ನೀಡಿದವರು. ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತ ಚರ್ಚೆಯಲ್ಲಿ ಸದಾ ವಿಶ್ವಾಸವಿಟ್ಟವರು. ಭಾರತೀಯ ಪತ್ರಿಕೋದ್ಯಮದಲ್ಲಿ ಆವಿಷ್ಕಾರಿ ಪ್ರಯೋಗಗಳನ್ನು ಮಾಡಿದ, ಯಾವುದೇ ರಾಜಿ-ಮರ್ಜಿಗೆ ಸಿಲುಕದೆ ಅತ್ಯಂತ ವಿಶ್ವಾಸಾರ್ಹ ಎನಿಸಿಕೊಂಡ, ‘ಸಂಪಾದಕರ ಸಂಪಾದಕ’ ಎಂದು ಹೆಸರಾದ ವಿನೋದ್ ಮೆಹ್ತಾ ಅವರ ಜೀವನ ಕಥನವನ್ನು ಕಟ್ಟಿಕೊಟ್ಟಿರುವ ಕೃತಿ ’ಲಖನೌ ಹುಡುಗ- ವಿನೋದ್ ಮೆಹ್ತಾ
ಶಶಿ ಸಂಪಳ್ಳಿ ಅವರು ಸಾಗರ ತಾಲೂಕಿನ ಪುಟ್ಟ ಸಂಪಳ್ಳಿಯಲ್ಲಿ ಜನಿಸಿದರು. ಕುವೆಂಪು ವಿವಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ವಿಜಯ ಕರ್ನಾಟಕ, ಪ್ರಜಾವಾಣಿ , ಕನ್ನಡ ಪ್ರಭ, ದಿ ಸಂಡೆ ಇಂಡಿಯನ್ ಪತ್ರಿಕೆಗಳಲ್ಲಿ ವೃತ್ತಿಯನ್ನು ನಿರ್ವಹಿಸಿದ್ದಾರೆ. ಪರಿಸರ ಅಭಿವೃದ್ಧಿ, ಗ್ರಾಮೀಣ, ಕೃಷಿ ಹಾಗು ರಾಜಕೀಯ ವಿಶ್ಲೇಷಣೆ ಮೊದಲಾದ ಕ್ಷೇತ್ರಗಳಲ್ಲಿ ಇವರು ಪರಿಣತಿಯನ್ನು ಹೊಂದಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದ ಪರಿಸರ-ಕೃಷಿ ಬಿಕ್ಕಟ್ಟುಗಳು, ಡಾ.ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಕುರಿತು ಲೇಖನಗಳನ್ನು ರಚಿಸಿದ್ದಾರೆ. ಕೆಲವು ಸಾಹಿತ್ಯ ವಿಮರ್ಶನಾ ಲೇಖನಗಳನ್ನ ಕೂಡ ರಚಿಸಿದ್ದಾರೆ. ವನ್ಯ ...
READ MORE