ಅಲ್ಲೂರಿ ಸೀತಾರಾಮ ರಾಜು

Author : ಬಾಬು ಕೃಷ್ಣಮೂರ್ತಿ

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಅಲ್ಲೂರಿ ಸೀತಾರಾಮ ರಾಜು ಎಂಬುದು ಜೀವನಗಾಥೆಯ ಪುಸ್ತಕ. ಲೇಖಕ ಬಾಬು ಕೃಷ್ಣಮೂರ್ತಿ ಅವರು ರಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ಬದುಕಿನ ಆಯಾಮಗಳನ್ನು ಚಿತ್ರಿಸಲಾಗಿದೆ. ಸ್ವಾತಂತ್ರ್ಯವಿಲ್ಲದವರಿಗೆ ಗೌರವವಾಗಲಿ ನ್ಯಾಯವಾಗಲಿ ದೊರೆಯುವುದಿಲ್ಲ ಎಂದು ಮನಗಂಡು ಬ್ರಿಟಿಷರ ವಿರುದ್ಧ ಹೋರಾಡಿದ ಕಲಿ. ಸಾಮಾನ್ಯ ಜನರನ್ನೇ ದೃಢ ಮನಸ್ಸಿನ ಯೋಧರನ್ನಾಗಿ ಮಾಡಿದ ನಾಯಕ. ದೇಶಕ್ಕಾಗಿ ಪ್ರಾಣ ತೆತ್ತ ಹುತಾತ್ಮ ಎಂದು ಸೀತಾರಾಮ ರಾಜು ಕುರಿತಾಗಿ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. ಜನಸಾಮಾನ್ಯರೊಂದಿಗೆ ಸಾಮಾನ್ಯವಾಗಿ ಅವರನ್ನು ಒಂದುಗೂಡಿಸಿ, ಸ್ವಾತಂತ್ಯ್ರದ ಮಹತ್ವವನ್ನು ಅವರಿಗೆ ಮನದಟ್ಟು ಮಾಡಿದ ಒಬ್ಬ ಅದ್ವಿತೀಯ ಸ್ವಾತಂತ್ರ್ಯ ಹೊರಾಟಗಾರನ ಜೀವನದ ಮೌಲ್ಯಯುತ ಭಾಗಗಳನ್ನು ಈ ಕೃತಿಯಲ್ಲಿ ಸರಳ ಕನ್ನಡದಲ್ಲಿ ವಿವರಿಸಲಾಗಿದೆ.

About the Author

ಬಾಬು ಕೃಷ್ಣಮೂರ್ತಿ

ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...

READ MORE

Related Books