‘ಕಲ್ಯಾಣ ಸ್ವಾಮಿ’ ಎಂಬುದು ಜೀವನ ಚರಿತ್ರೆಯ ಪುಸ್ತಕ. ಲೇಖಕ ಈಶ್ವರಚಂದ್ರ ರಚಿಸಿದ್ದಾರೆ. ಕಲ್ಯಾಣ ಸ್ವಾಮಿ ಎಂಬ ವೀರ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸೆರೆಮನೆ ಸೇರಿದ. ಪುಟ್ಟಬಸಪ್ಪ ಎಂಬುವನು ಕಲ್ಯಾಣಸ್ವಾಮಿ ಎಂಬ ಹೆಸರಿನಿಂದ ಹೋರಾಟವನ್ನು ಮುಂದುವರಿಸಿದ. ಇಂಗ್ಲಿಷರು ತಳಮಳಿಸುವಂತೆ ಹೋರಾಡಿದ. ಕಡೆಗೆ ಪ್ರಾಣವನ್ನೇ ಕೊಟ್ಟ ಎಂದು ಕಲ್ಯಾಣ ಸ್ವಾಮಿ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕಲ್ಯಾಣ ಸ್ವಾಮಿ ಅವರ ಹಿನ್ನಲೆ, ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಪರಿ, ಬ್ರಿಟಿಷರೊಂದಿಗಿನ ಹೋರಾಟ, ಸೆರೆಮನೆ ವಾಸ, ಪ್ರಾಣ ತ್ಯಾಗ ಮಾಡಿದ ಕ್ಷಣ ಹೀಗೆ ಅವರ ಬದುಕಿನ ತಿರುವುಗಳನ್ನು ಲೇಖಕರು ಈ ಪುಸ್ತಕದಲ್ಲಿ ಸರಳ ಕನ್ನಡದಲ್ಲಿ ಚಿತ್ರಿಸಿದ್ದಾರೆ.
ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ 14, 1946ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ...
READ MORE