ಸ್ವರ ಸಾಮ್ರಾಟ್

Author : ಸ್ಮಿತಾ ಕಾರ್ತಿಕ್

Pages 162

₹ 200.00




Year of Publication: 2018
Published by: ಸಪ್ನ ಬು,ಕ್ ಹೌಸ್
Address: ಗಾಂಧಿನಗರ ಮುಖ್ಯರಸ್ತೆ, ಬೆಂಗಳೂರು.

Synopsys

ಕನ್ನಡ ಚಿತ್ರರಂಗಕ್ಕೆ ರಾಜನ್-ನಾಗೇಂದ್ರ ಜೋಡಿಯು ಸೂಪರ್ ಹಿಟ್ ಹಾಡುಗಳನ್ನು ನಿಡುತ್ತಾಬಂದಿದೆ.ತಮ್ಮ ಮಧುರ ಸಂಗೀತ ಸಂಯೋಜನೆಯಿಂದ ಅನೇಕ ಇಂಪಾದ ಗೀತೆಗಳನ್ನು ಚಿತ್ರರಸಿಕರಿಗೆ ಉಣಬಡಿಸಿದೆ. ಜೀವವೀಣೆ, ಎಂದೆಂದೂ ನಿನ್ನನು ಮರೆತು ಬದುಕಿರಲಾರೆ, ನೀ ನಡೆವ ಹಾದಿಯಲ್ಲಿ ನಮೂರು ಮೈಸೂರು ನಿಮೂರು ಯಾವೂರು, ಕಾಲವನ್ನು ತಡೆಯೋರು ಯಾರೂ ಇಲ್ಲ, ತರಿಕೆರೆ ಏರಿ ಮೇಲೆ, ನೋಟದಾಗೆ ನಗೆಯಾ ಮೀಟಿ, ನಿನ್ನ ರೂಪು ಎದೆಯ ಕೆಣಕಿ,ಹೀಗೆ ಹಲವಾರು ಸೂಪರ್‌ ಹಿಟ್ ಹಾಡುಗಳು ಕೇಳುಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ.ನಿರಂತರ ಪ್ರಯತ್ನ ಹಾಗೂ ಸಹನೆಯ ಮೂಲಕ ಯಶಸ್ವಿನ ಹಿರಿಮೆಯನ್ನು ತನ್ನದಾಗಿಸಿದ್ದಾರೆ.ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಿರುವ ಸ್ಟುಡಿಯೋ, ರೆಕಾರ್ಡಿಂಗ್, ಸಂಗೀತ ವಾದ್ಯಗಳ ಜೊತೆ ಹೊಂದಿಕೊಂಡ ರೀತಿಯನ್ನು ವಿವರಿಸಲಾಗಿದೆ.

About the Author

ಸ್ಮಿತಾ ಕಾರ್ತಿಕ್

ಸಂಗೀತಗಾರ್ತಿ ಸ್ಮಿತಾ ಕಾರ್ತಿಕ್‌ ಅವರು ಕವಿ, ಲೇಖಕಿ ಕೂಡ. ಲಘುಸಂಗೀತ ಮತ್ತು ಚಿತ್ರಸಂಗೀತದಲ್ಲಿ ಕಳೆದ ಕೆಲ ವರ್ಷಗಳಿಂದ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಕೆ.ಜಿ. ಕನಕಲಕ್ಷ್ಮಿ ಅವರಿಂದ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಸ್ಮಿತಾ ಅವರು ಗುರು ಸೋಮಸುಂದರಂ ಅವರಿಂದ ಲಘುಸಂಗೀತ ಕಲಿತಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ರಾಜನ್ -ನಾಗೇಂದ್ರ ಅವರಿಂದ ಚಿತ್ರಗೀತೆಗಳಿಗೆ ಸಂಬಂಧಿಸಿದಂತೆ ನೆರವು ಪಡೆದಿದ್ದಾರೆ. ದೇಶ-ವಿದೇಶಗಳಲ್ಲಿ ಸಂಗೀತ ಕಚೇರಿ ನೀಡಿರುವ ಸ್ಮಿತಾ ಅವರ ’ನಡಿ ಮನವೆ ರಾಯರ ಬೃಂದಾವನಕೆ’ ಹಾಗೂ ’ಕದ್ರಿ ಮಂಜುನಾಥ ಗೀತಾಮೃತ’ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ರಘುನಂದನ್‌ ಶ್ರೀನಿವಾಸನ್‌ ಅವರ ’ಸ್ವರಸಾಮ್ರಾಟ್‌ ರಾಜನ್‌ ನಾಗೇಂದ್ರ” ಕೃತಿಯನ್ನು ...

READ MORE

Related Books