ಅನ್ನಾ ಫ್ರಾಂಕ್ ದಿನಚರಿಯು ವೀರಯ್ಯ ಕೋಗಳಿಮಠ್ ಅವರ ಅನುವಾದಿತ ಕೃತಿಯಾಗಿದೆ. ಅನ್ನಾ ಫ್ರಾಂಕ್ ದಿನಚರಿಯ ಪುಟಗಳು, 2ನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ ನಾಝಿಗಳ ಕಣ್ತಪ್ಪಿಸಿ 8 ಜನರು ಒಂದೇ ಕುಟುಂಬದಂತೆ ಹಾಲೆಂಡಿನ ಒಂದು ರಹಸ್ಯ ಅನ್ನೆಕ್ಸಿನಲ್ಲಿ ಜೀವನ ಸಾಗಿಸಬೇಕೆನ್ನುವ ಅನಿವಾರ್ಯತೆಯನ್ನು ಬಣ್ಣಿಸುತ್ತದೆ. ಇಂತಹ ಸಂದರ್ಭದಲ್ಲಿ ನಾಝಿಗಳ ಕ್ರೂರವರ್ತನೆ, ಯಹೂದಿಗಳ ಬಂಧನ ಮತ್ತು ಉಸಿರುಕಟ್ಟುವಂತಹ ಬಿಕ್ಕಟ್ಟಿನ ವಾತಾವರಣದಲ್ಲಿ ಬದುಕನ್ನು ಸವೆಸಬೇಕಾಗುವ ಕ್ಷಣಗಳನ್ನು ಪುಟ್ಟ ಬಾಲಕಿಯು ಪ್ರಭುದ್ದತೆಯಿಂದ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾಳೆ. ಈ ದಿನಚರಿಯು ಒಬ್ಬ ಹದಿಹರೆಯದ ಹುಡುಗಿಯ ಮನಃಸ್ಥಿತಿ, ತುಮುಲ ಮತ್ತು ಭಾವನೆಗಳ ಪ್ರತೀಕವೆಂದರೆ ಅತಿಶಯೋಕ್ತಿಯಾಗಲಾರದು. ಅನ್ನಾಗೆ 13ನೇ ಹುಟ್ಟುಹಬ್ಬದಂದು ಅವಳ ತಂದೆಯಿಂದ ಉಡುಗೊರೆಯಾಗಿ ದೊರೆತ ದಿನಚರಿಯಲ್ಲಿ ಬದುಕಿನಲ್ಲಿ ಕರಾಳದಿನಗಳಿಂದ ಶುರುವಾಗುವ ಅನುಭವಗಳನ್ನು ತನ್ನ ಕಥನದೊಂದಿಗೆ ಬೆರೆಸುತ್ತಾ ಬರೆಯುತ್ತಾಳೆ. ಬರೆಯುವ ಕಾಗದಕ್ಕಿರುವಷ್ಟು ತಾಳ್ಮೆ ಜನರಿಗಿರುವುದಿಲ್ಲ ಎಂಬ ಭಾವನೆ ಅವಳದ್ದು. ತನ್ನ ಸುನ್ನಿತ ಭಾವನೆಗಳನ್ನು ಹಂಚಿಕೊಳ್ಳಲು ನಿಜಗೆಳೆಯರ ಮತ್ತು ಒಂಟಿತನದ ಕೊರತೆ ನೀಗಿಸಿಕೊಳ್ಳಲು ದಿನಚರಿಯನ್ನೇ ಗೆಳೆಯನನ್ನಾಗಿ ಆಶ್ರಯಿಸುತ್ತಾಳೆ. ತನ್ನ ಕುಟುಂಬದೊಂದಿಗೆ ಪ್ರತಿಕೂಲ ಸ್ಥಿತಿಯಲ್ಲಿ ದಿನಗಳನ್ನು ಕಳೆಯುವಂತಹ ಸಂದರ್ಭ ಬಂದಾಗ, ಅನ್ನಾಳು ಧೃತಿಗೆಡದೆ ಹೇಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾ ಭರವಸೆಯ ವ್ಯಕ್ತಿಯಾಗಿ ಹೊರಹೊಮ್ಮುತ್ತಾಳೆ ಎಂಬುದಕ್ಕೆ ಈ ದಿನಚರಿಯು ಒಂದು ಜ್ವಲಂತ ನಿದರ್ಶನ. ಇಂದಿಗೆ ದಿನಚರಿಯು 75 ವರ್ಷಗಳನ್ನೇ ಪೂರೈಸಿದ್ದರೂ, ಹಿಂದೆಂದಿಗಿಂತಲೂ ಯುವಜನತೆಗೆ ಉತ್ಸಾಹ-ಹುರುಪನ್ನು ತುಂಬುವ ಅದ್ಭುತ ಕೃತಿಯಾಗಿ ಕಾಲ, ದೇಶ, ಭಾಷೆಗಳ ಮೇರೆ ಮೀರಿ ನಿಂತಿದೆ. ದಿನಚರಿಯಲ್ಲಿ ವ್ಯಕ್ತವಾಗುವ ಕಷ್ಟ ಸಹಿಷ್ಣುತೆ, ಸೂಕ್ಷ್ಮ ಸಂಬಂಧಗಳು, ಸಂಘರ್ಷಗಳು, ಮಾನಸಿಕ ತುಮುಲಗಳು, ಮತ್ತು ಬದುಕುಳಿಯುವ ಚೈತನ್ಯಗಳು ಮಾಸದೆ ಇಂದಿಗೂ ಪ್ರಸ್ತುತವಾಗಿವೆ ಮತ್ತು ವೀರಯ್ಯ ಕೋಗಳಿಮಠ್ ಅವರ ಲೇಖನಿಯಿಂದ ದಿನಚರಿಯ ಅನುವಾದವು ಯಥಾವತ್ತಾಗಿ ಮೂಡಿಬಂದಿದೆ ಎಂದು ಎಸ್ ಕೆ ಎಸ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ವೀರಯ್ಯ ಕೋಗಳಿಮಠ ಅವರು ಜೂನ್ 13, 1972 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಜನಿಸಿದರು. ತಂದೆ ಸೋಮಯ್ಯ ಮತ್ತು ತಾಯಿ ಶಾಂಭವಿ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸ್ವಂತ ಊರಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ತಮ್ಮ ವಿದ್ಯಾಭ್ಯಾಸವನ್ನು ದಾವಣಗೆರೆಯ BDT ಕಾಲೇಜಿನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು, ಮೈಸೂರಿನ ಶ್ರೀ ಜಯ ಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ MTech ಪದವಿಯನ್ನು ಹಾಗು ಅಂತರ ರಾಷ್ಟ್ರೀಯ ನಿರ್ವಹಣಾ ಸಂಸ್ಥೆ (IMI) ದೆಹಲಿಯಿಂದ Ex PGDM ಪದವಿ ಪಡೆದಿದ್ದಾರೆ. ಪ್ರಸ್ತುತ ಶ್ರೀಯುತರು ಬೆಂಗಳೂರಿನ ಹಿಂದೂಸ್ತಾನ್ ...
READ MORE