‘ಗಾಂಧಿ ಊರಿನ ಮೋದಿ’ ಮಹಾತ್ಮ ಗಾಂಧೀಜಿ ಅವರ ಗುಜರಾತ್ ನಾಡಿನಿಂದ ಬಂದ ಪ್ರಧಾನಿ ರೇಂದ್ರ ಮೋದಿ ಅವರ ಬದುಕು, ಸಾಧನೆಗಳ ವಿವರಣೆ ಹಾಗೂ ವಿಶ್ಲೇಷಿಸಿದ ಕೃತಿ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಹಿಡಿದು ಅವರು ಜಾರಿಗೆ ತಂದ ಹಾಗೂ ತರಲು ಉದ್ದೇಶಿಸಿರುವ ಯೋಜನೆಗಳ ಕುರಿತು ಮಾಹಿತಿಯನ್ನು ಒಳಗೊಂಡಿದೆ. ಮೂರು ಬಾರಿ ಮುದ್ರಣ ಕಂಡ ಕೃತಿಯು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಹಾದಿಯನ್ನು ಬಿಂಬಿಸುತ್ತದೆ.
ಗುಣವಂತ ಮಂಜು ಎಂತಲೇ ಪರಿಚಿತರಾಗಿರುವ ನಿರ್ದೇಶಕ ಬರಹಗಾರ ಎಸ್.ಎನ್. ಮಂಜುನಾಥ್ ಅವರ ಹುಟ್ಟೂರು ಕೋಲಾರ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಧಾರಾವಾಹಿ ಸಂಚಿಕೆಗಳ ಬರವಣಿಗೆ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಮತ್ತೊಂದು ಸ್ವಾತಂತ್ಯ್ರ, ಅಂದು ಆಂಗ್ಲರು ಇಂದು ಉಗ್ರರು, ಸ್ನೇಹಿತೆ, ಡಜನ್ ಚಿತ್ರಗಳು, ಒಬ್ಬ ವ್ಯಕ್ತಿ ನೂರು ಮುಖ, ಗಾಂಧಿ ಊರಿನಲ್ಲಿ, ಉತ್ಸವ, ಡಮರುಗ ಮುಂತಾದವು. ಮೈಲಾರಿ, ತಾಜ್‌ಮಹಲ್, ಚಾರ್‌ಮಿನಾರ್, ಕೋಕೋ, ಲಕ್ಷ್ಮೀ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬರಹ ...
READ MORE