ಲೇಖ-ಲೋಕ 8

Author : ವನಮಾಲಾ ಸಂಪನ್ನಕುಮಾರ್

Pages 178

₹ 150.00




Year of Publication: 2020
Published by: ಕರ್ನಾಟಕ ಲೇಖಕಿಯರ ಸಂಘ
Address: 206, 2ನೇ ಮಹಡಿ, ವಿಜಯ ಮ್ಯಾನ್‌ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018.

Synopsys

ಲೇಖ-ಲೋಕ 8 ಕೃತಿಯು ಲೇಖಕಿಯರ ಆತ್ಮಕಥನಗಳ ಸಂಕಲನವಾಗಿದ್ದು, ಪುಸ್ತಕದ ಪ್ರಧಾನ ಸಂಪಾದಕರಾಗಿ ವನಮಾಲಾ ಸಂಪನ್ನಕುಮಾರ ಹಾಗೂ ಸಂಪಾದಕರಾಗಿ ಜಿ.ವಿ ನಿರ್ಮಲಾ ಅವರು ಈ ಪುಸ್ತಕವನ್ನು ಹೊರತಂದಿದ್ದಾರೆ. ಕೃತಿಯಲ್ಲಿ ಲೇಖಕಿಯರು ತಮ್ಮ ಸಾಧನೆ ಸಂತೃಪ್ತಿಗಳನ್ನು ಸಮಾನ ಮನಸ್ಕರೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಡಾ.ಕಮಲಾ ಹೆಮ್ಮಿಗೆ, ಸವಿತಾ ನಾಗಭೂಷಣ, ಡಿ.ಬಿ. ರಜಿಯಾ, ಡಾ. ಮಮತಾ ರಾವ್‌, ಉಷಾ ನರಸಿಂಹನ್‌, ಡಾ. ದಾಕ್ಷಾಯಿಣಿ ಯಡಹಳ್ಳಿ, ಎಲ್.‌ ಗಿರಿಜಾ ರಾವ್‌, ಜಿ.ಸಿ. ಭ್ರಮರಾಂಬ ಕಲಾಶ್ರೀ ಅವರ ಆತ್ಮಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ. ಹೀಗೆ ಕರ್ನಾಟಕ ಲೇಖಕಿಯರ ಸಂಘವು ಲೇಖಕಿಯರ ಆತ್ಮಕಥೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ, ಲೇಖಕಿಯರ ಜೀವನದ ಸಂಘರ್ಷ, ಸಾಧನೆ, ಆಯಾಯ ಕಾಲದ ಸಾಂಸ್ಕೃತಿಕ ಬದುಕಿನ ಪರಿಚಯ ಓದುಗರಿಗೆ ಸಿಗುವಂತಾಗಿದೆ ಎಂದು ಕೃತಿಯ ಬೆನ್ನುಡಿಯಲ್ಲಿ ಹೇಳಲಾಗಿದೆ.

About the Author

ವನಮಾಲಾ ಸಂಪನ್ನಕುಮಾರ್

ಹಲವಾರು ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಹಿತ್ಯಕ್ಕೆ ಕೊಡುಗೆ ನೀಡುತ್ತಾ ಬಂದವರು ವನಮಾಲಾ ಸಂಪನ್ನಕುಮಾರ್. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. 1964 ಡಿಸೆಂಬರ್‌ 15 ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ತಂದೆ ಮಹಾಲಿಂಗ ಶೆಟ್ಟಿ, ತಾಯಿ ಸಂಜೀವಿ ಎಂ. ಶೆಟ್ಟಿ. ವಾಸಂತಿ ಪಡುಕೋಣೆ (ಜೀವನ ಚರಿತ್ರೆ) (ಸಂಪಾದನೆ), ಗರಿಕೆ (ಉದಯೋನ್ಮುಖರ ಕವಿತೆಗಳು) ಪ್ರಕಟಗೊಂಡಿವೆ.  ನಮ್ಮ ಬದುಕಿನ ಪುಟಗಳು, ನಮ್ಮ ಬದುಕು ನಮ್ಮ ಬರಹ (ಲೇಖಕಿಯರ ಆತ್ಮ ಕಥಾನಕಗಳು) ಕೃತಿಗಳನ್ನು ರಚಿಸಿದ್ದಾರೆ. ಅವರು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ, ಉಪಾಧ್ಯಕ್ಷೆ ಹುದ್ದೆ, ಬೆಂಗಳೂರು ಬಂಟರ ಸಂಘದ ಸ್ನೇಹ ಚಿಂತನ ಮಾಸಿಕದ ಸಂಪಾದಕ ಮಂಡಳಿ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.     ...

READ MORE

Related Books