ಹದಿನೈದು ಮತ್ತು ಹದಿನಾರನೇ ಶತಮಾನದ ನಡುವೆ ಬದುಕಿದ್ದ ನಿಕೋಲಸ್ ಕೊಪರ್ನಿಕಸ್ ಆಧುನಿಕ ಖಗೋಳ ವಿಜ್ಞಾನದ ಪಿತಾಮಹ ಎನಿಸಿಕೊಂಡವನು. ಸೂರ್ಯನ ಸುತ್ತ ಭೂಮಿ ಸುತ್ತುತ್ತಿದೆ ಎಂದು ಸತ್ಯ ಹೇಳಿ ಪುರೋಹಿತ ಶಾಹಿಗಳನ್ನು ಎದುರುಹಾಕಿಕೊಂಡ ಕೊಪರ್ನಿಕಸ್ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಈಗ ಸೂರ್ಯನೇ ಸೌರ ಮಂಡಲದ ಕೇಂದ್ರ ಎಂದು ಎಲ್ಲರೂ ಒಪ್ಪಿದ್ದಾರೆ. ಅವನು ಹಚ್ಚಿದ ಖಗೋಳ ಕ್ರಾಂತಿಯ ಕಿಡಿ ಇಂದು ಹಣತೆಯಾಗಿ ಬೆಳಗುತ್ತಿದೆ. ಅವರ ಬಾಲ್ಯ-ಜೀವನ-ಸಾಧನೆಯನ್ನು ಈ ಕೃತಿಯಲ್ಲಿ ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರು ನೀಡಿದ್ದು ಸಾಹಿತಿ ಸೋಮೇಶ್ವರ ಸಂಪಾದಿಸಿದ್ದಾರೆ.
ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರು ಈ ಪರಿಸರ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲದೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಪಡೆದಿದ್ದಾರೆ. ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಇವರು ವಿಜ್ಞಾನ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು. ಇವರ ಹಲವಾರು ಪುಸ್ತಕ- ಲೇಖನ ...
READ MORE