ವೆಂಕಮ್ಮ ಕೆ.ಎಸ್.ನ ಅವರ ನೆನಪಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಕೆಲ ವರ್ಷಗಳ ಹಿಂದೆ ಕವಿಪತ್ನಿ ದಿನ ಆಚರಿಸಿತು. ಆ ಸಂದರ್ಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರ ಪತ್ನಿ ಸತ್ಯಭಾಮ ಕಂಬಾರ ಅವರ ಕುರಿತಾಗಿ ಬರೆದ ಕೃತಿ 'ನಿನ್ನೊಲುಮೆಯಿಂದಲೇ'.
ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಪತ್ನಿ ರಜನಿ ನರಹಳ್ಳಿಯವರು ಕಂಬಾರರ ಕುಟುಂಬದೊಂದಿಗೆ ಒಡನಾಟವಿದ್ದು, ತೀರಾ ಹತ್ತಿರದಿಂದ ಸತ್ಯಭಾಮ ಅವರನ್ನು ಗಮನಿಸಿದ್ದಾರೆ. ಸತ್ಯಭಾಮ ಅವರ ಕುರಿತು ಹೊರ ಜಗತ್ತಿಗೆ ಕಾಣದ ಅನೇಕ ಸಂಗತಿಗಳನ್ನು ಪ್ರೀತಿಯಿಂದ ದಾಖಲಿಸಿದ್ದಾರೆ. ಅಭಿನವ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ.
ರಜನಿ ನರಹಳ್ಳಿ ಅವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯವರು. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎ.ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಕೃತಿಗಳು: ನನ್ನು ಅಜ್ಜಿಯ ಜಗತ್ತು, ಆತ್ಮವೃತ್ತಾಂತ, ಅಮ್ಮಮ್ಮ ಹೇಳಿದ ಕತೆಗಳು, ಸಂಸ್ಕೃತಿ ಪೋಷಕ ಲಕ್ಷ್ಮೀ ನಾರಾಯಣ ಪ್ರಶಸ್ತಿ-ಪುರಸ್ಕಾರಗಳು: ವೀಚಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಗಳು ಲಭಿಸಿವೆ. ...
READ MORE