ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಅವರು ಮೂಲ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ-ಶ್ರೀ ರಾಮಕೃಷ್ಣ ಜೀವನ ಚರಿತ್ರೆ. ಶ್ರೀ ರಾಮಕೃಷ್ಣ ಪರಮಹಂಸರು ಸಂಸಾರದಲ್ಲಿದ್ದರೂ ಅಧ್ಯಾತ್ಮ ಜೀವಿಗಳು. ಅಧ್ಯಾತ್ಮ ಯೋಗಿಯಂತೆ ಇದ್ದು, ಜೀವನ ಸಾರ್ಥಕತೆಯ ಸಂದೇಶ ನೀಡಿದರು. ಲೌಕಿಕ-ಅಲೌಕಿಕ ಬದುಕಿನ ಸ್ವರೂಪ ಹಾಗೂ ಸ್ವಭಾವವನ್ನು ಕಾಣಿಸಿದ್ದಾರೆ.
ಹಿಮಾಲಯದ ಅದ್ವೈತ ಆಶ್ರಮ (ಮಾಯಾವತಿ) ಮೂಲ ಗ್ರಂಥಕ್ಕೆ ಮಹಾತ್ಮ ಗಾಂಧೀಜಿ ಅವರು ಮುನ್ನುಡಿ ಬರೆದಿದ್ದು, ಇದನ್ನೂ ಸಹ ಕಾರಂತರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಗ್ರಂಥದಲ್ಲಿ, ಹಿರಿಯರು, ಜನ್ಮ, ಶೈಶವ, ಬಾಲ್ಯ, ಜಗನ್ಮಾತೆಯ ಪ್ರಥಮ ದರ್ಶನ, ದೈವೋನ್ಮತ್ತ ಸ್ಥಿತಿ, ಹಲಾಧರಿ, ಭೈರವಿ ಬ್ರಾಹ್ಮಣಿ, ತಾಂತ್ರಿಕ ಸಾಧನೆ, ವಿಯೋಗ ದುಃಖಗಳು, ನರೇಂದ್ರನಾಥ, ಹೃದಯನ ನಿರ್ಗಮನ, ಕೆಲವು ಪ್ರಖ್ಯಾತರೊಡನೆ, ತಾರಕ ಮತ್ತು ವೈಕುಂಠ, ಶಾರದಾ, ತುಲಸಿ, ದಕ್ಷಿಣೇಶ್ವರವನ್ನು ಬೀಳ್ಕೊಟ್ಟುದು, ಕೋಸಿಪುರ ಉದ್ಯಾನದಲ್ಲಿ ಮತ್ತು ಮಹಾಸಮಾಧಿ, ಅವಸಾನದ ಬಳಿಕ ಇತ್ಯಾದಿ ಶೀರ್ಷಿಕೆಗಳ ಮೂಲಕ ಶ್ರೀರಾಮಕೃಷ್ಣ ಪರಮಹಂಸರ ಸಂಪೂರ್ಣ ಜೀವನ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ.
ಮಂಗಳೂರಿನ ಶ್ರೀರಾಮಕೃಷ್ಣಾಶ್ರಮವು 1953ರಲ್ಲಿ (ಪುಟ: 668) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE