ನರಗುಂದದ ಬಾಬಾಸಾಹೇಬ ಜೀವನಚರಿತ್ರೆ ಪುಸ್ತಕವನ್ನು ಲೇಖಕ ವೆಂ.ಮು. ಜೋಶಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಇಂಗ್ಲೀಷರನ್ನು ವಿರೋಧಿಸಿ ಆತ್ಮಗೌರವಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಸರ್ವಾರ್ಪಣೆ ಮಾಡಿದ ಕನ್ನಡನಾಡಿನ ವೀರ. ಅನ್ಯಾಯದಿಂದ ಇಂಗ್ಲೀಷರು ವರ್ತಿಸಿದಾಗ ಪ್ರತಿಭಟಿಸಿದ, ಪರಾಕ್ರಮದಿಂದ ಹೋರಾಡಿದ, ಇವನ ವೀರ ಮಾತೆಯೂ ವೀರ ಪತ್ನಿಯೂ ಮಲಪ್ರಭ ನದಿಯನ್ನು ಮೊರೆಹೊಕ್ಕರು. ಬಾಬಾ ಸಾಹೇಬ ಗಲ್ಲಿಗೇರಿದ ಎಂದು ನರಗುಂದದ ಬಾಬಾಸಾಹೇಬ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ನರಗುಂದದ ಬಾಬಾಸಾಹೇಬ ಅವರ ಬಾಲ್ಯ ಜೀವನ, ಸ್ವಾತಂತ್ರ್ಯ ಹೋರಾಟದ ದಿನಗಳು,ಜನರೊಂದಿಗಿನ ಅವಿನಾಭಾವ ಸಂಬಂಧ ಹೀಗೆ ಅವರ ಬದುಕಿನ ವಿವಿಧ ಆಯಾಮಗಳಲ್ಲಿ ಲೇಖಕರು ಈ ಪುಸ್ತಕವನ್ನು ರಚಿಸಿದ್ದಾರೆ.
ಲೇಖಕ ಜೋಶಿ ವೆಂ.ಮು. ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು. ಕರ್ನಾಟಕ ರಾಜ್ಯದ ಸಣ್ಣ ಉಳಿತಾಯ ಇಲಾಖೆಯ ಪ್ರಚಾರಕರಾಗಿದ್ದರು. ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ರಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕೃತಿಗಳು; ಚಿನ್ನದ ಪದಕ, ಹೊಸಬೆಳಕು, ಸೈನಿಕ ಉವಾಚ, ಸಮರ ಸೌದಾಮಿನಿ, ಸೆಳೆತದ ಶಿಲುಬೆ. ...
READ MORE