ಕನ್ನಡ ವಿಜ್ಞಾನ ಸಾಹಿತ್ಯದ ದ್ರೋಣಾಚಾರ್ಯ ಎಂದೇ ಖ್ಯಾತಿಯ ಆರ್.ಎಲ್. ನರಸಿಂಹಯ್ಯ ಅವರ ಬದುಕು ಬರೆಹ ಕುರಿತು ಡಾ. ಟಿ.ಆರ್. ಅನಂತರಾಮು ಅವರು ಬರೆದಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಆರ್.ಎಲ್. ನರಸಿಂಹಯ್ಯ ಅವರು ಭೌತಶಾಸ್ತ್ರದ ಅಧ್ಯಾಪಕರಾಗಿದ್ದರು. ಜನಸಾಮಾನ್ಯರಿಗೂ ವಿಜ್ಞಾನದ ಮಾಹಿತಿ ಇರಬೇಕು ಎಂದು ಸದುದ್ದೇಶದೊಂದಿಗೆ ಅವರು ಕನ್ನಡದಲ್ಲೇ ವೈಜ್ಞಾನಿಕ ಲೇಖನಗಳನ್ನು ಬರೆದರು. ಆದ್ದರಿಂದ, ಇವರನ್ನು ಕನ್ನಡದ ವಿಜ್ಞಾನ ದ್ರೋಣಾಚಾರ್ಯರೆಂದೇ ಕೆರೆಯಲಾಗುತ್ತಿದೆ. ಇವರ ಬದುಕು-ಬರೆಹಗಳ ಮೂಲಕವೇ ಅವರ ಇಡೀ ಜೀವನ ವೃತ್ತಾಂತಗಳ ಕುರಿತ ಚಿತ್ರಣ ನೀಡುವ ಕೃತಿ ಇದಾಗಿದೆ.
ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ. ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ...
READ MORE