’ಧರೆಗಿಳಿದ ದೀಪಗಳು’ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ, ಮೂಢನಂಬಿಕೆ, ಜಾತಿ ಪದ್ಧತಿ ನಿಷೇಧ, ಬಾಲ್ಯವಿವಾಹ ಹಾಗೂ ವರದಕ್ಷಿಣೆ ವಿರೋಧಿಸಿ, ಜನರಲ್ಲಿ ಜಾಗೃತಿ ಮೂಡಿಸಿದ್ದ ಮಹನೀಯರ ಜೀವನ ಚಿತ್ರವನ್ನು ಪರಿಚಯಿಸುವ ಕೃತಿಯಾಗಿದೆ. ಲಕ್ಷಾಂತರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಹೆಣ್ಣುಮಕ್ಕಳಿಗೂ ಶಿಕ್ಷಣ ಸಿಗಬೇಕೆಂದು ಅವಮಾನಗಳನ್ನು ಸಹಿಸಿಕೊಂಡು ಶಿಕ್ಷಿತರನ್ನಾಗಿ ಮಾಡಿದ ಸಾವಿತ್ರಿ ಬಾ ಫುಲೆ, ಜ್ಯೋತಿ ಬಾ ಫುಲೆ, ಹಾಗೂ ವಿಧವಾ ವಿವಾಹದ ಬಗ್ಗೆ ಧ್ವನಿ ಎತ್ತಿದ ರಾಜಾರಾಂ ಮೋಹನ್ ರಾಯ್ ಅವರ ಹೋರಾಟದ ಬದುಕು ಹಾಗೂ ಸಾಧನೆಗಳ ಸಂಕ್ಷಿಪ್ತ ಚಿತ್ರಣ ಈ ಕೃತಿಯಲ್ಲಿದೆ.
ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ. ಅವರು ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ. ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ...
READ MORE