ಸಂಸತ್ ಪಟು ಎಂ. ಗೋವಿಂದ ರೆಡ್ಡಿ ಅವರ ಬದುಕು-ಬರೆಹ ಕುರಿತು ಲೇಖಕಿ ಕೆ.ಆರ್. ಸಂಧ್ಯಾರೆಡ್ಡಿ ಅವರು ಬರೆದ ಕೃತಿ ’ಅಪೂರ್ವ ಜೀವ’. ಗೋವಿಂದರೆಡ್ಡಿ ಅವರ ಅಂತರಂಗದ ಆತ್ಮಶ್ರೀ ಹಾಗೂ ಬಹಿರಂಗದ ಸೌಂದರ್ಯ ಎರಡನ್ನೂ ಸಮೀಕರಿಸಿ ಬರೆದ ಕೃತಿ ಇದಾಗಿದೆ.
ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿರುವ ಕನ್ನಡಿಗರ ನೆಚ್ಚಿನ ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ ಅವರು ಜನಿಸಿದ್ದು 1953 ಜೂನ್ 22ರಂದು ಚಿತ್ರದುರ್ಗದಲ್ಲಿ. ಎನ್‌ಜಿಇಎಫ್ ನಲ್ಲಿ ಉಪ ನಿರ್ವಹಕರಾಗಿ ಸೇವೆ ಸಲ್ಲಿಸಿರುವ ಅವರು ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಇವರ ಅನುವಾದಿತ ಕೃತಿಗಳೆಂದರೆ - ಬರ್ಕ್ ವೈಟ್ ಕಂಡ ಭಾರತ, Half way to Freedom, ಆಸನ ಪ್ರಾಣಾಯಾಮ ಮುದ್ರಾಬಂಧ, ನೆಹರೂವಾದದ ಹುಟ್ಟು ಮತ್ತು ಬೆಳವಣಿಗೆ, ಉಗ್ರಾಣ ನಿರ್ವಹಣೆ, ಸೃಜನಶೀಲ ಪ್ರತಿಭೆ, ದೇಹದ ರಚನಾ ವ್ಯವಸ್ಥೆಗಳು, ಹೊಸ ಬಗೆಯ ಶಕ್ತಿ ವ್ಯವಸ್ಥೆಗಳು. ಸಂಪಾದಿತ ಕೃತಿಗಳು : ಗ್ರಾಮೀಣ ಪಶುಸಾಕಣೆ, ಗ್ರಾಮೀಣ ...
READ MORE