`ಅಶ್ವಘೋಷ' ಎಂಬುದು ಜೀವನಚರಿತ್ರೆಯ ಪುಸ್ತಕ. ಲೇಖಕಿ ಸರಿತಾ ಜ್ಞಾನಾನಂದ ಅವರು ರಚಿಸಿದ್ದಾರೆ. ಈಗ ತಿಳಿದಿರುವ ಮಟ್ಟಿಗೆ, ಭಾರತದ ಮೊದಲನೆಯ ನಾಟಕಕಾರ. ಒಳ್ಳೆಯ ಕವಿ. ಬೌದ್ಧ ಸಂನ್ಯಾಸಿಯಾಗಿ ಜನರಿಗೆ ಧರ್ಮದ ಉಪದೇಶ ಮಾಡಿದ. ಕಾವ್ಯವನ್ನು ಜನರಿಗೆ ಧರ್ಮ ಮಾರ್ಗ ತೋರಿಸಲು ಬಳಸಿದ ಎಂದು ಅಶ್ವಘೋಷನ ಜೀವನದ ವಿವಿಧ ಆಯಾಮಗಳನ್ನು ಲೇಖಕಿ ಇಲ್ಲಿ ವಿವರಿಸಿದ್ದಾರೆ. ನಾಟಕಗಳಲ್ಲಿ ಅಶ್ವಘೋಷನ ಕೊಡುಗೆಗಳು, ಏಳು-ಬೀಳುಗಳು, ಬೌದ್ದ ಸನ್ಯಾಸಿಯಾದ ಪರಿ, ಉಪದೇಶಗಳು ಹೀಗೆ ವಿವಿಧ ಆಯಾಮಗಳನ್ನು ಈ ಪುಸ್ತಕದಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.
ಸರಿತಾ ಜ್ಞಾನಾನಂದ ಅವರು ಮೂಲತಃ ಬೆಂಗಳೂರಿನವರು. ತಂದೆ- ಎನ್. ಆರ್. ನಂಜುಂಡಸ್ವಾಮಿ, ತಾಯಿ- ಸುಬ್ಬಮ್ಮ. 21-01-1943ರಲ್ಲಿ ಜನಿಸಿದ ಅವರು ಅಧ್ಯಾಪಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸರಿತಾ ಜ್ಞಾನಾನಂದ ಅವರು ಒಂದೂರಲ್ಲಿ ಒಬ್ಬ ನಿರ್ಮಲಾ, ಪರಿಪೂರ್ಣ, ತನ್ನ ಮೀನು-ತಾನಾದ, ಬೆಂಕಿ ಹೂ, ಪಾಕಿಸ್ತಾನದಲ್ಲಿ ಶಂಕರ್ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿಯೂ ಕೃಷಿ ಮಾಡಿರುವ ಅವರು ವಿದಾಯ, ವಿಷಗರ್ಭ, ಪ್ರಕೃತಿ ಸಂಶೋಧನೆ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಜೊತೆಗೆ ಹೆಣ್ಣೆ ಹೆಚ್ಚು ಎಂಬ ನಾಟಕನ್ನು ರಚಿಸಿರುವ ಅವರು ಆಚಾರ್ಯಾಭಿವಂದನೆ, ಕಲಾರಾಧನೆ ...
READ MORE