ವೀರಬ್ರಹ್ಮಯ್ಯ ಆಂಧ್ರ ಪ್ರದೇಶದ ಹಲವಾರು ಸುಧಾರಕರಲ್ಲಿ ಬಹುಮುಖ್ಯರು. ಬ್ರಹ್ಮಜ್ಞಾನದ ಅರಿವಿಗೆ ವರ್ಣ ವ್ಯವಸ್ಥೆಯ ಲಿಂಗಭೇದದ ಆತಂಕವಿಲ್ಲವೆಂದು ಸಾರಿ ಹೇಳಿದವರು. ಇದರ ನಿಟ್ಟಿನಲ್ಲಿ ಸಮಾಜದ ಹಲವು ವರ್ಣದವರನ್ನು ಸಾಧನೆಯಲ್ಲಿ ತೊಡಗುವಂತೆ ಪ್ರೇರಿಪಿಸಿದವರು. ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದಾಗ ಅವುಗಳನ್ನು ಖಂಡಿಸಿ, ತಮ್ಮ ಸಿದ್ದಾಂತವನ್ನು ಮೆರೆದವರು.
ವೀರಬ್ರಹ್ಮಯ್ಯನವರು ಉತ್ತಮ ಕೃತಿ ರಚನಾಕಾರರೂ ಆಗಿದ್ದರು. ಇವರ ಜೀವನ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ, ಅನೇಕ ಕೃತಿಗಳು ಹೊರಬಂದಿವೆ. ಇವರ ಕಾಲ, ತಂದೆ-ತಾಯಿಯರ ಹಿನ್ನೆಲೆ, ಅವರ ಸಾಹಿತ್ಯ ರಚನೆ, ಅವರ ಆಧ್ಯಾತ್ಮಿಕ ಒಲವು – ಸಾಧನೆ, ಸಾಹಿತ್ಯ ಸೃಷ್ಟಿಯ ಆಸಕ್ತಿ, ಹೀಗೆ ಅವರ ಸಾಮಾಜಿಕ ಚಿಂತನೆಯನ್ನು ಅರಿತುಕೊಳ್ಳುವ ಆಕರ ಕೃತಿಯಾಗಿ ಡಾ. ಶೇಷಶಾಸ್ತ್ರಿ ಅವರು ಈ ಪುಸ್ತಕವನ್ನು ರಚಿಸಿದ್ಧಾರೆ.
ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಬಹುಭಾಷಾ ಪಂಡಿತರ ಪರಂಪರೆಗೆ ಸೇರಿದವರು ಡಾ. ಆರ್. ಶೇಷಶಾಸ್ತ್ರಿ. ಅಧ್ಯಾಪಕ, ಲೇಖಕ, ಅನುವಾದಕ, ಸಂಶೋಧಕರಾಗಿ ಅದರದ್ದು ಬಹುಮುಖ ಪ್ರತಿಭೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಶೇಷಶಾಸ್ತ್ರಿಗಳ ಹುಟ್ಟೂರು. ಬೆಂಗಳೂರು ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದ ಅವರು ಸಂಶೋಧಕ ಸಹಾಯಕರಾಗಿ ವೃತ್ತಿ ಬದುಕನ್ನು ಆರಂಭಿಸಿದರು. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಕನ್ನಡ ಅಧ್ಯಾಪಕ, ರೀಡರ್, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ಆನಂತರದಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾದರು ಜೊತೆಗೆ, ಕುಪ್ಪಂನ ದ್ರಾವಿಡ ವಿವಿಯಲ್ಲಿ ಕನ್ನಡ ಮತ್ತು ಅನುವಾದ ವಿಭಾಗದ ಸ್ಥಾಪಕ ...
READ MORE