ಮಹಾಸಂಗ್ರಾಮಿ ಎಸ್.ಆರ್. ಹಿರೇಮಠ

Author : ರೂಪ ಹಾಸನ

Pages 464

₹ 600.00




Year of Publication: 2023
Published by: ಅಭಿರುಚಿ ಪ್ರಕಾಶನ
Address: #36, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರಂ, ಮೈಸೂರು- 570009
Phone: 9980560013

Synopsys

‘ಮಹಾಸಂಗ್ರಾಮಿ’ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ. ಈ ಕೃತಿಯನ್ನು ಲೇಖಕಿ ರೂಪ ಹಾಸನ ಅವರು ನಿರೂಪಿಸಿದ್ದಾರೆ. ಈ ಕೃತಿಯ ಹಿರಿಯ ಪತ್ರಕರ್ತ, ಲೇಖಕ ಸುಗತ ಶ್ರೀನಿವಾಸರಾಜು ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ತಿಳಿಸುತ್ತಾ ‘ನಮ್ಮ ಇಂದಿನ ಸಾಮಾಜಿಕ ವಾತಾವರಣದಲ್ಲಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವ ವಿಚಾರವೆಂದರೆ ಆದರ್ಶಕ್ಕೆ ಸಂಬಂಧಿಸಿದ್ದು. ಈ ಆದರ್ಶಕ್ಕೆ ಇರುವ ಮುಗ್ಧತೆ, ಮೊನಚು ನೈತಿಕತೆ ಮತ್ತು ಹಠ ನಮ್ಮ ನಡುವೆ ಮಾಯವಾಗುತ್ತಿರುವ ಹೊತ್ತಿನಲ್ಲಿ; ಸಾರ್ವಜನಿಕ ಹಿತಾಸಕ್ತಿ ಎಂಬುದು ಎರಡು ಪಕ್ಷಗಳ ವಾದ ಎಂಬ ಕೃತಕ ಬೌದ್ಧಿಕ ವಲಯ ಸೃಷ್ಟಿಯಾಗುತ್ತಿರುವ ಹೊತ್ತಿನಲ್ಲಿ; ನಾಣ್ಯದ ಎರಡು ಮುಖಗಳೆಂಬಂತೆ ಸತ್ಯವನ್ನು ಸೀಮಿತ ಆಯ್ಕೆಗೆ ಸಿಲುಕಿಸುತ್ತಿರುವ ಹೊತ್ತಿನಲ್ಲಿ, ಎಸ್.ಆರ್.ಹಿರೇಮಠರ ಜೀವನ ಚರಿತ್ರೆ ಬರುತ್ತಿರುವುದು ನಮ್ಮ ಕಾಲಕ್ಕೆ ಮಾಡುತ್ತಿರುವ ದೊಡ್ಡ ಉಪಕಾರ. ಏಕೆಂದರೆ, ಹಿರೇಮಠರು ನಮಗೆ ಎರಡರಾಚೆಗಿನ ಮೂರನೇ ಮತ್ತು ಮೂರರಾಚಿನ ಹಲವು ಆಯಾಮದ ಪ್ರತಿನಿಧಿಯಾಗಿ ಸದಾ ಕಂಡುಬಂದಿರುವುದರಿಂದ. ಹಿರೇಮಠರ ಬದುಕು ಜಿಗಿತಗಳಿಂದ ಕೂಡಿದ್ದು: ಬಡತನದಿಂದ ಸಿರಿತನಕ್ಕೆ ಜಿಗಿದು, ಹಳ್ಳಿಯಿಂದ ನಗರಕ್ಕೆ, ದೇಶದಿಂದ ವಿದೇಶಕ್ಕೆ ಜಿಗಿದು, ಮತ್ತೆ ವಿದೇಶದಿಂದ ದೇಶಕ್ಕೆ ಜಿಗಿದು, ಮತ್ತೆ ಸಿರಿತನದಿಂದ ಸರಳತೆಗೆ ಜಿಗಿದು, ಒಂದು ಒಳಿತಿನಿಂದ ಮತ್ತೊಂದು ಒಳಿತಿಗೆ ಜಿಗಿದು, ನಿರಂತರ ಜಿಗಿಯುತ್ತಲೇ ಇರುವ ಹಿರೇಮಠರ ತುಂಬು ಬದುಕು ಮತ್ತು ಉತ್ಸಾಹ ಅಪರೂಪದ್ದು ಮತ್ತು ಅಪೂರ್ವವಾದದ್ದು. ಹಿರೇಮಠರು ಎಂದೂ ಸಿದ್ಧಾಂತದ ಹಂಗಿಗೆ ಸಿಕ್ಕಿಹಾಕಿಕೊಂಡವರಲ್ಲ. ಆದರೆ, ವಿಶಾಲ ಹಿತ, ಪ್ರಜಾಪ್ರಭುತ್ವದ ಮರ್ಜಿಗೆ ಬಿದ್ದವರು. ಮೌಲ್ಯಗಳಿಗಾಗಿ ಕಠಿಣ ಶಿಸ್ತಿನ ಬಡಿದಾಟ ನಡೆಸಿದವರು. ದೇಶಾಭಿಮಾನವನ್ನು ಸಂವಿಧಾನದ ಕಣ್ಗಾವಲಿನಲ್ಲಿ ಇರಿಸಿದವರು. ಹಿರೇಮಠರು ಅಮೇರಿಕದಲ್ಲೇ ಉಳಿದುಕೊಂಡಿದ್ದರೆ ಬ್ಯಾಂಕ್ ತುಂಬಾ ಹಣ ಶೇಖರಿಸಿ ಊರು-ಕಾಡುಗಳನ್ನು ಕೊಳ್ಳಬಹುದಿತ್ತು. ಆದರೆ, ಭಾರತದ ಬಡತನಕ್ಕಾಗಿ, ಅದರ ಜಲ್-ಜಂಗಲ್-ಜಮೀನು ಉಳಿವಿಗಾಗಿ ಎಲ್ಲವನ್ನೂ ತ್ಯಜಿಸಿದವರು. ಅವರ ದೊಡ್ಡ ತ್ಯಾಗ ನಾವು ಸಾಧಾರಣವಾಗಿ ಕಾಣದ ಆದರ್ಶದ ದೊಡ್ಡ ಹುಚ್ಚು. ಕ್ರಾಂತಿಯ ಅವಸರ ಮತ್ತು ಅಸಹನೆಗೆ ಎಟುಕದ ಅಹಿಂಸೆಯ ಸಾತ್ವಿಕತೆ ಎಂದಿದ್ದಾರೆ. ಹಾಗೇ ಈ ಪುಸ್ತಕವನ್ನು ರೂಪ ಹಾಸನ ಅವರು ಶ್ರಮ, ಶ್ರದ್ಧೆ, ಮತ್ತು ಪ್ರೀತಿಯಿಂದ ಮಾತ್ರ ಕಟ್ಟಿಕೊಟ್ಟಿಲ್ಲ. ವಿವೇಕ, ವಿವೇಚನೆ ಮತ್ತು ಜವಾಬ್ದಾರಿಯಿಂದಲೂ ಹೆಣೆದಿದ್ದಾರೆ. ಹಿರೇಮಠರ ಜೀವನ ಚರಿತ್ರೆ ಜತೆಗೆ ಒಂದು ತಲೆಮಾರಿನ ಕನಸುಗಳನ್ನ, ಸಮಕಾಲೀನ ಚರಿತ್ರೆಯ ಕಾಲುದಾರಿಗಳನ್ನ ಹಿಡಿದಿಟ್ಟಿದ್ದಾರೆ. ಅವರು ನಮ್ಮೆಲ್ಲರ ಅಭಿನಂದನೆಗೆ ಅರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ’.

About the Author

ರೂಪ ಹಾಸನ

ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ)  , ಕಡಲಿಗೆಷ್ಟೊಂದು ಬಾಗಿಲು, ಲಹರಿ ,  ಮಹಿಳೆ ಮತ್ತುಆಧುನಿಕತೆಯ ಸವಾಲುಗಳು,  ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಡಾ. ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ 2000, ಶಿವಮೊಗ್ಗದ ಕರ್ನಾಟಕ ಸಂಘ, ನೀಲಗಂಗಾದತ್ತಿ ಪ್ರಶಸ್ತಿ 2010, ಕನ್ನಡ ಸಾಹಿತ್ಯ ಪರಿಷತ್ತು. ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ 2000, ಹರಿಹರ ಶ್ರೀ ಪ್ರಶಸ್ತಿ 2010, ಸೇಡಂನ ಅಮ್ಮ ಪ್ರಶಸ್ತಿ 2010, ಡಿ.ವಿ.ಜಿ. ಸಾಹಿತ್ಯ ಪ್ರಶಸ್ತಿ 2001, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ 2001, ...

READ MORE

Related Books