ರಾಮಪ್ರಸಾದ ಬಿಸ್ಮಿಲ್

Author : ಎನ್.ಪಿ. ಶಂಕರನಾರಾಯಣ ರಾವ್

Pages 102

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.

Synopsys

`ರಾಮಪ್ರಸಾದ ಬಿಸ್ಮಿಲ್' ಅವರ ಜೀವನಚರಿತ್ರೆಯ ಪುಸ್ತಕವಿದು. ಲೇಖಕ ಎನ್.‌ ಪಿ. ಶಂಕರ ನಾರಾಯಣರಾವ್‌ ಅವರು ರಚಿಸಿದ್ದಾರೆ. ದೇಶಕ್ಕಾಗಿ ನಗುನಗುತ್ತ ಪ್ರಾಣವನ್ನರ್ಪಿಸಿದ ಕ್ರಾಂತಿವೀರ. ವಿದೇಶೀ ಸರ್ಕಾರದ ಕೋಪ, ಪೊಲೀಸರ ಬೇಟೆ, ಜೊತೆಯ ಕೆಲಸಗಾರರ ದ್ರೋಹ ಎಲ್ಲವನ್ನು ಎದುರಿಸಿ ಕ್ರಾಂತಿಯ ಉರಿಯನ್ನು ಹೊತ್ತಿಸಿದ – ಗುಲಾಮಗಿರಿಯನ್ನು ಅದರಲ್ಲಿ ಸುಟ್ಟು ಹಾಕಲು. ಕಾಕೋರಿ ರೈಲು ಡಕಾಯಿತಿಯ ಸಾಹಸಿ ನಾಯಕ. ಇವನ ಕಾವ್ಯವೂ ತಾಯ್ನಾಡಿಗೆ ಆರತಿ ಎಂದು ರಾಮಪ್ರಸಾದ ಬಿಸ್ಮಿಲ್ ಅವರ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಎನ್.ಪಿ. ಶಂಕರನಾರಾಯಣ ರಾವ್
(03 August 1928 - 28 November 2006)

.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...

READ MORE

Related Books