ಭಕ್ತ ಕನಕದಾಸ

Author : ಶರಣಬಸಪ್ಪ ವಡ್ಡನಕೇರಿ

Pages 80

₹ 20.00




Year of Publication: 2016
Published by: ಸ್ನೇಹ ಪ್ರಕಾಶನ
Address: ಕಲಬುರಗಿ

Synopsys

ಲೇಖಕ ಶರಣಬಸಪ್ಪ ವಡ್ಡನಕೇರಿ ಅವರ ಕೃತಿ-ಭಕ್ತ ಕನಕದಾಸ. ಭಕ್ತಿ ಪ್ರಸಾರದಲ್ಲಿ ವಚನ ಸಾಹಿತ್ಯಕ್ಕೆ ಪರ್ಯಾಯವಾಗಿ ಕೀರ್ತನ ಸಾಹಿತ್ಯ ಬೆಳೆಯಿತು.ವಚನಕಾರರು ಜನಸಾಮಾನ್ಯರ ಮಾತುಗಳಲ್ಲಿ ಭಕ್ತಿಪರ್ವದ ರಚನೆಗಳನ್ನು ಮಾಡಿ ಅನುಭವಗಳ ಮೂಲಕ ಜನತೆಯ ಸಮೀಪಕ್ಕೆ ಹೋಗಿದ್ದರೆ ಕೀರ್ತನಕಾರರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾಳ ತಂಬೂರಿಯನ್ನು ಹಿಡಿದುಕೊಂಡು ಮನೆಮನೆಗೆ ಹೋಗಿ ಭಕ್ತಿಯನ್ನು ಪ್ರಸಾರ ಮಾಡಿದರು. ಸಾಮಾಜಿಕ ನೈತಿಕ ಬೋಧನೆಗಳಲ್ಲಿ ಕೀರ್ತನಕಾರರು ಹಿಂದುಳಿಯಲಿಲ್ಲ ಕನ್ನಡ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 20ನೇ ಶತಮಾನದ ನವೋದಯ ಸಾಹಿತ್ಯದ ಮೇಲೆ ಪರೋಕ್ಷವಾಗಿ ಕೀರ್ತನ ಸಾಹಿತ್ಯದ ಪ್ರಭಾವವನ್ನು ಕಾಣಬಹುದು

. ಭಾವಗೀತೆಯ ಭಾವಾರ್ಥ ಮತ್ತು ಮಾದರಿಯಾಗಿ ನವೋದಯ ಸಾಹಿತ್ಯ ಪ್ರೇರಕವಾಯಿತು.ಆಡುನುಡಿಯನ್ನು ಕಾವ್ಯದ ನುಡಿಯಾಗಿ ಮಾಡುವುದರಲ್ಲಿ ಪುರಂದರದಾಸರು, ಕನಕದಾಸರಂತಹ ಕೀರ್ತನಕಾರರು ತುಂಬಾ ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಕನಕದಾಸರ ಕುರಿತು ಶರಣಬಸಪ್ಪ ವಡ್ಡನಕೇರಿ ಅವರು ಕಿರು ಕೃತಿಯನ್ನು ಪ್ರಕಟಿಸಿದ್ದು, ಈ ಕೃತಿಯಲ್ಲಿ ಕನಕದಾಸರ ಜೀವನ ವೃತ್ತಾಂತ, ಕನಕದಾಸರ ಕೀರ್ತನೆ ಅಂಕಿತ, ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ,ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಕಾಳಜಿ, ಕನಕದಾಸರ ಕೀರ್ತನೆಗಳಲ್ಲಿ ಸಾಹಿತ್ಯಕ ಮೌಲ್ಯ, ಕನಕದಾಸರ ಕೀರ್ತನೆಗಳು, ಸವಿಸ್ತಾರವಾಗಿ ವಿವರಿಸಿದ್ದಾರೆ.

About the Author

ಶರಣಬಸಪ್ಪ ವಡ್ಡನಕೇರಿ
(22 May 1980)

ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...

READ MORE

Related Books