ಶ್ರೀ ಶಂಭುಲಿಂಗೇಶ್ವರ : ಮಾತೇ ಬಸಮ್ಮ ಪೂಜ್ಯ ಸದ್ಗುರು ಮಹಾತ್ಮೆ- ಈ ಕೃತಿಯ ಕರ್ತೃ ಡಾ. ಎಂ.ಜಿ. ದೇಶಪಾಂಡೆ. ಶ್ರೀಶಂಭುಲಿಂಗೇಶ್ವರ ಮಾತೆ ಬಸಮ್ಮ ಪೂಜ್ಯ ಸದ್ಗುರು ಮಹಾತ್ಮೆ ತಿಳಿಸುವ ಜೀವನ ಚರಿತ್ರೆ. ಈ ಪವಾಡ ಪುರುಷರು ಆಧ್ಯಾತ್ಮಿಕ ನೆಲೆಯಲ್ಲಿ ಬಾಳಿ ತಮ್ಮ ಜೀವನುದ್ದಕ್ಕೂ ಪವಾಡಗಳನ್ನು ಮೆರೆದು, ಸಮಾಜ ಹಾಗೂ ಜನರ ಕಲ್ಯಾಣಕ್ಕೆ ತಮ್ಮ ಬದುಕನ್ನು ಮೀಸಲಿರಿಸಿಕೊಂಡಿದ್ದರು . ಶ್ರೀ ಶಂಭುಲಿಂಗೇಶ್ವರರು ಮತ್ತು ಮಾತೆ ಬಸಮ್ಮ ಅವರು ತಮ್ಮ ಜೀವನದಲ್ಲಿ ಅನೇಕ ಮಾನವೀಯ ಸಂಬಂಧಗಳನ್ನು ಬೆಳಗಿಸುವುದರೊಂದಿಗೆ ಜನರ ಬದುಕುಗಳನ್ನು ಉದ್ಧಾರಗೊಳಿಸಿದ್ದರು . ಇವರೀರ್ವರು ಮಹಾ ಚೇತನ ಸ್ವರೂಪಿಗಳಾಗಿದ್ದರು. ಅಸಾಧ್ಯವೆನಿಸುವ ಲೀಲೆ ಪವಾಡವನ್ನು ತೋರಿದ್ದರು . ಶ್ರೀ ಎನ್ ಬಿ ರೆಡ್ಡಿ ಗುರೂಜಿಯವರ ಚರಿತ್ರೆಯು ಸಂಕ್ಷಿಪ್ತವಾಗಿ ಇಲ್ಲಿ ಅಡಕವಾಗಿದೆ . ರೇಕುಳಗಿ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ .ಈ ಗ್ರಂಥವು ಭಕ್ತರಿಗೆ ಪಾರಾಯಣ ಗ್ರಂಥವೂ ಆಗಿದೆ. ಈ ಗ್ರಂಥವು ಹಿಂದಿ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿದೆ.
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE