ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಟಿ. ಸುನಂದಮ್ಮನವರ ಹೆಸರು ಮುಂಚೂಣಿಯಲ್ಲಿರುವಂಥದ್ದು. ಒಂಭತ್ತನೇ ವಯಸ್ಸಿಗೇ, 'ಹೂವು' ಎಂಬ ಕವನ ಬರೆದು ಸಾಹಿತ್ಯದ ಬಗ್ಗೆ ತಮಗಿರುವ ಒಲವನ್ನು ಬಾಲ್ಯದಲ್ಲಿಯೇ ತೋರಿಸಿಕೊಂಡವರು ಸುನಂದಮ. ನಂತರ ಡಾ. ಶಿವರಾಂ ರವರ “ಕೊರವಂಜಿ' ಪತ್ರಿಕೆ ಶುರುವಾದಾಗ, ಅವರ ಮೊದಲ ಹಾಸ್ಯ ಲೇಖನ 'ನಾನ್ಯಾರಿಟ್ಟಿದ್ದು' ಪ್ರಕಟವಾಗಿತ್ತು. ಕೊರವಂಜಿಗೆ ಸತತವಾಗಿ 25 ವರ್ಷ ಲೇಖನಗಳನ್ನು ಬರೆದುಕೊಟ್ಟ ಕೀರ್ತಿ ಸುನಂದಮನವರದ್ದು, ಮಧ್ಯಮ ವರ್ಗದ ದಂಪತಿಯ ಜೀವನವನ್ನೇ ದೃಷ್ಟಿಯಲ್ಲಿಟ್ಟುಕೊಂಡು ವಿಡಂಬನೆ ಮಾಡಿ ಬರೆಯುತ್ತಿದ್ದುದು ಇವರ ವಿಶೇಷತೆ. ಇವರ ಹಾಸ್ಯ ಯಾವತ್ತೂ ಚಿಕಿತ್ಸಕ, ಇವರ ಹಾಸ್ಯ ಕಥನಗಳಲ್ಲಿ ಸ್ತ್ರೀಯರ ಪಾತ್ರಗಳೇ ಮುಖ್ಯ ಭೂಮಿಕೆಯಲ್ಲಿ ಇರುತ್ತವೆ. ಹೆಣ್ಣಿನ ಪರಿಭಾಷೆಯಲ್ಲೇ ವಿವರಿಸುವುದು ಸುನಂದಮ್ಮನವರ ವೈಶಿಷ್ಟ, ಆಪ್ತ ಸಂಭಾಷಣೆ, ಲವಲವಿಕೆಯ ಭಾವ, ಬರವಣಿಗೆಯಲ್ಲಿ ಅವರು ಉಪಯೋಗಿಸುವ ನುಡಿಗಟ್ಟು, ಗಾದೆ ಇವೆಲ್ಲ ಸುನಂದಮ್ಮನವರ ಸಾಹಿತ್ಯದಲ್ಲಿ ಪ್ರಸಿದ್ದಿ. ಈ ಕೃತಿಯಲ್ಲಿ ಸುನಂದಮ್ಮನವರ ರಸವತ್ತಾದ ಹಾಸ್ಯಬರಹಗಳಿವೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE