‘ಭಾರತದಲ್ಲಿ ಆಧುನಿಕ ವಿಜ್ಞಾನದ ಸಂಸ್ಥಾಪಕರು’ ಸಿ. ಎನ್. ಆರ್. ರಾವ್ ಮತ್ತು ಇಂದುಮತಿ ರಾವ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಮುನ್ನುಡಿ ಬರಹವಿದೆ; ಆಧುನಿಕ ವಿಜ್ಞಾನವು ಕೆಲವು ಶತಮಾನಗಳ ಹಿಂದೆಯಷ್ಟೇ ಆರಂಭವಾಗಿದೆ ಎಂದು ಪರಿಗಣಿಸಬಹುದು. ಈ ನಂಬಿಕೆಯು ಸಮಂಜಸವಾಗಿದೆ ಎನ್ನಬಹುದು ಏಕೆಂದರೆ, ಭೌತವಿಜ್ಞಾನದ ಔಪಚಾರಿಕ ಆರಂಭವನ್ನು 17ನೇ ಶತಮಾನದ ಉತ್ತರಾರ್ಧಕ್ಕೆ ಗುರುತಿಸಬಹುದು. ನಾವಿಂದು ತಿಳಿದುಕೊಂಡ ಆಧುನಿಕ ವಿಜ್ಞಾನವು ಭಾರತವನ್ನು ಪ್ರವೇಶಿಸಲು ಎರಡು ಶತಮಾನಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದೆ. ದಾಖಲಾದ ಹಲವಾರು ಆವಿಷ್ಕಾರಗಳ ಪುರಾವೆಗಳನ್ನು ಅವಲೋಕಿಸಿದಾಗ, ಆಧುನಿಕ ವಿಜ್ಞಾನವು ಭಾರತದಲ್ಲಿ 19ನೇ ಶತಮಾನದಿಂದೀಚೆಗೆ ಬಳಕೆಯಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದಿನಿಂದ ನಾವು ಬಹಳಷ್ಟು ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ವಿಜ್ಞಾನದ ಅನೇಕ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನೂ ನೀಡುತ್ತಿದ್ದೇವೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.