`ಮತಿಘಟ್ಟ ಕೃಷ್ಣಮೂರ್ತಿ' ವ್ಯಕ್ತಿಚಿತ್ರಣದ ಪುಸ್ತಕವಿದು. ಲೇಖಕ ಹಂಪನಹಳ್ಳಿ ತಿಮ್ಮೇಗೌಡ ರಚಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿಸಾಹಿತಿ ಪ್ರೊ.ಡಿ. ಲಿಂಗಯ್ಯ ‘ಮತಿಘಟ್ಟ ಕೃಷ್ಣಮೂರ್ತಿ ಅವರು ಮೈಸೂರು ಸಂಸ್ಥಾನದಲ್ಲಿ ವ್ಯಾಪಕವಾಗಿ ಕ್ಷೇತ್ರಕಾರ್ಯ ನಡೆಸಿ, ಅಪಾರ ಸಂಖ್ಯೆಯಲ್ಲಿ ಅಪರೂಪದ ಜನಪದ ಗೀತೆಗಳನ್ನು ಸಂಗ್ರಹಿಸಿ, ಬೃಹತ್ ಪ್ರಮಾಣದಲ್ಲಿ ಪ್ರಕಟಿಸಿ ಹೆಸರಾದವರು. ಬ್ರಾಹ್ಣಣ ಜನಪದ ಗೀತೆಗಳನ್ನು ಸಂಗ್ರಹಿಸಿದವರಲ್ಲಿ ಮೊದಲಿಗರು. ಜನಪದ ಗೀತೆಗಳನ್ನು ಆಕಾಶವಾಣಿಯಲ್ಲಿ ಸುಗಮ ಸಂಗೀತಗಾರರಾಗಿ ಹಾಡಲು, ಗ್ರಾಮೋಫೋನು ಧ್ವನಿಮುದ್ರಿಕೆ ತಯಾರಿಸಲು ನೇರವಾಗಿ ಜನಪದ ಗೀತೆಗಳು ತಯಾರಾಗಲು ಗಮನ ಕೊಟ್ಟರು’ ಎಂಬುದಾಗಿ ಪ್ರಶಂಸಿಸಿದ್ದಾರೆ.
ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. ...
READ MORE