ಲೇಖಕಿ ಕೆ. ಲಕ್ಷ್ಮಿ ಅವರು ರಚಿಸಿದ ಕೃತಿ-ಪರಂಜ್ಯೋತಿ. ಶ್ರೀ ಶಿರಡಿ ಸಾಯಿಬಾಬ ಚರಿತೆಯ ಕೃತಿ ಇದು. ಅತ್ಯಂತ ಸರಳ ಭಾಷೆಯಲ್ಲಿ ಸಾಯಿಬಾಬ ಅವರ ಬೋಧೆಗಳನ್ನು, ಜೀವನ ವೃತ್ತಾಂತಗಳನ್ನು ತಿಳಿಸಲಾಗಿದೆ. ಸಾಮಾನ್ಯ ವ್ಯಕ್ತಿಯಾಗಿದ್ದೂ, ದೈವತ್ವಕ್ಕೆ ಏರಿದ ವ್ಯಕ್ತಿತ್ವವನ್ನು ಇಲ್ಲಿ ಪರಿಚಯಿಸಲಾಗಿದೆ. ಬಹಳಷ್ಟು ಭಕ್ತರ ಕಣ್ಣಲ್ಲಿ ಇವರು ದೇವರಾಗಿಯೇ ಇದ್ದು, ಇಂದಿಗೂ ಭಕ್ತರ ಬೇಡಿಕೆಗಳನ್ನು ಈಡೇರಿಸುವ ಕಾಮಧೇನುವಿನಂತೆ ಕಂಡು ಬರುತ್ತಿದ್ದಾರೆ. ಆದರೆ, ಸಹನೆ, ಶ್ರದ್ಧೆ ಇಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಸಾಯಿಬಾಬ ಅವರು ಬೋಧಿಸಿದ್ದು, ಅದೇ ಬದುಕಿನ ಉನ್ನತ ಆಚರಣೆ ಎಂದೂ ಕೃತಿಯಲ್ಲಿ ಹೇಳಲಾಗಿದೆ.
ಲಕ್ಷ್ಮಿ ಕೆ. ಅವರು ಮೂಲತಃ ಮಂಜೇಶ್ವರದವರು. ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ. ದ್ರಾವಿಡ ಭಾಷೆಗಳನ್ನು ಬಲ್ಲವರು. ‘ಮರುಭೂಮಿಯ ಮಳೆ ಹನಿಗಳು’ ಅವರ ಕವನ ಸಂಕಲನ. ...
READ MORE