ಅಭಿನವ ಪ್ರಕಾಶನದ, ಶತಮಾನ ಚಿಂತನೆ ಮಾಲಿಕೆಯ ಮೊದಲ ಪುಸ್ತಕ ಇದು. ತಮ್ಮ ಚಿಂತನೆ ಮತ್ತು ಕೆಲಸಗಳ ಮೂಲಕ ಪ್ರಪಂಚದ ಗಮನ ಸೆಳೆದ ಅಂಟೋನಿಯೋ ಗ್ರಾಮ್ಷಿ ಕುರಿತ ಈ ಹೊತ್ತಿಗೆಯನ್ನು ಲೇಖಕ, ಚಿಂತಕ ಕೆ. ಫಣಿರಾಜ್ ರಚಿಸಿದ್ದಾರೆ.
ಭಾರತದ ಮಟ್ಟಿಗೆ ಹೇಳುವುದಾದರೆ ಅಂಟೋನಿಯೊ ಗ್ರಾಮ್ಷಿಯ ವಿಚಾರಗಳು ವಿದ್ವಾ೦ಸರ ಮಧ್ಯೆ ಮಾತ್ರ ಚಾಲಿಯಲ್ಲಿ ಇವೆ. ಗ್ರಾಮ್ಷಿ ಇಟಾಲಿಯ ಕಮ್ಯೂನಿಷ್ಟ್ ಪಕ್ಷದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಸಮಾಜವಾದಿ ಚಿಂತಕ ಮತ್ತು ರಾಜಕಾರಣಿ, ಮಾತ್ರವಲ್ಲದೆ, ಮಾರ್ಕ್ಸ್‌ವಾದಿ ಚಿಂತನಾಕ್ರಮಕ್ಕೆ ಹೊಸ ಜೀವ ತುಂಬಿದವನು. ಆದರೂ ಭಾರತದ ಎಡಪಂಥದ ಸಂಘಟನೆಗಳಲ್ಲಿ ಆತನ ಹೆಸರು ಕೇಳಿ ಬರುವುದಿಲ್ಲ. ಲೆನಿನ್, ಸ್ಟಾಲಿನ್, ಮಾವೊ, ಹೋ ಚಿ ಮಿನ್, ಚೆಗೆವಾರರ ಹೆಸರುಗಳಂತೂ ಸರಿಯೇ, ಟ್ರಾಟಸ್ಕಿ, ರೋಸ ಲಕ್ಸಂಬರ್ಗ್‌ರಂಥವರ ವಿಚಾರಗಳು ಅಷ್ಟಾಗಿ ಜನಪ್ರಿಯವಲ್ಲದಿದ್ದರೂ, ಅವರ ಹೆಸರುಗಳು ಒಂದು ಮಟ್ಟದವರೆಗೆ ಪರಿಚಿತವಾಗಿವೆ. ಆದರೆ, ಗ್ರಾಮ್ಷಿ ಯಾಕೆ ಅಷ್ಟು ಅನಾಮಧೇಯನಾಗಿ ಉಳಿದ್ದಿದ್ದಾನೆ ಎನ್ನುವುದು ಸ್ಪಷ್ಟವಾಗಿ ಗೊತ್ತಿಲ್ಲ ಎನ್ನುತ್ತಾರೆ ಲೇಖಕ ಕೆ. ಫಣಿರಾಜ್. ಆ ಕೊರತೆಯನ್ನು ತುಂಬಿಸುವ ನಿಟ್ಟಿನಲ್ಲಿ ಅಭಿನವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಲೇಖಕ, ಚಿಂತಕ ಕೆ.ಫಣಿರಾಜ್ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕಂಪ್ಲಿಯವರು. ಕಂಪ್ಲಿಯಲ್ಲಿ 1962ರಲ್ಲಿ ಜನಿಸಿದ ಅವರು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಮತ್ತು ಹೊಸಪೇಟೆಗಳಲ್ಲಿ ಪದವಿ ಪೂರ್ವದವರೆಗಿನ ವಿದ್ಯಾಭ್ಯಾಸ. ಗುಲ್ಬರ್ಗ, ಹುಬ್ಬಳ್ಳಿಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ. ಸ್ನಾತಕೋತ್ತರ ಪದವಿಗಳಿಗಾಗಿ ವಿದ್ಯಾಭ್ಯಾಸ. ಕಳೆದ 25 ವರ್ಷಗಳಿಂದ ಮಣಿಪಾಲದ ಇಂಜನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮೇಷ್ಟ್ರಾಗಿ ಕೆಲಸ ಮಾಡಿತ್ತಿದ್ದಾರೆ. ಮುವತ್ತೈದು ವರ್ಷಗಳಿಂದ ಎಡ ಚಳುವಳಿಗಳ ಒಡನಾಡಿಯಾಗಿದ್ದಾರೆ. ಕೋಮುವಾದದ ರಾಜಕೀಯ' (ಸಹ ಲೇಖಕ-ಜಿ.ರಾಜಶೇಖರ್, ಫಕೀರ್ ಮಹಮ್ಮದ್ ಕಟ್ಟಾಡಿಯವರೊಂದಿಗೆ), ' ಕೋಮುವಾದದ ಕರಾಳಮುಖಗಳು' (ಸಹಲೇಖಕ-ಎಸ್.ಆರ್.ಭಟ್, ಜಿ.ರಾಜಶೇಖರ್ ಅವರೊಂದಿಗೆ. ಅಂಟೋನಿಯೊ ಗ್ರಾಂಷಿ-ಸಮಾಜವಾದಿ ಚಿಂತಕ, ರಾಜಕಾರಣಿ', 'ಅಂಬೇಡ್ಕರರ ಆಯ್ದ ...
READ MORE