ಡಾ.ಸೋಮನಾಥ ಯಾಳವಾರ ಅವರ ರಚಿಸಿರುವ "ಆದಯ್ಯ" ಎನ್ನುವ ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ಶರಣ ಆದಯ್ಯ ನವರ ಪರಿಸರದ ಹಿನ್ನೆಲೆ, ಆದಯ್ಯನ ಕಾಲ,ಜನ್ಮಸ್ಥಳ, ಜೀವನಚರಿತ್ರೆ, ಆದಯ್ಯನ ವಚನಗಳು ಹಾಗೂ ಇತರ ಕೃತಿಗಳು, ತಾತ್ವಿಕ ವಿವರಣೆಗಳು, ಆದಯ್ಯನ ದೃಷ್ಟಿಯಲ್ಲಿ ನಿಜಯೋಗ, ಆದಯ್ಯನ ವಚನಗಳಲ್ಲಿ ಸಾಮಾಜಿಕ ವಿಚಾರಗಳು, ಬೆಡಗಿನ ವಚನಗಳು, ವಚನ ಸಾಹಿತ್ಯದಲ್ಲಿ ಆದಯ್ಯನ ಸ್ಥಾನಮಾನ, ಕುರಿತಂತೆ ಹಲವಾರು ವಿಷಯಗಳನ್ನು ಹಿಡಿದಿಟ್ಟಿದ್ದಾರೆ. ಈ ಕೃತಿಯು ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡಿದ್ದು,ಪುಟ ಹೊಂದಿರುವ ಕೃತಿಯ ಬೆಲೆ 25 ರೂಪಾಯಿ ಆಗಿದೆ.
ಡಾ.ಸೋಮನಾಥ ಯಾಳವಾರ ಅವರ ಹುಟ್ಟೂರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ. ತಂದೆ ಸಿದ್ದಪ್ಪ ತಾಯಿ ಶಿವಾನಂದಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ತಾರಾನಾಳ ಹಾಗೂ ಡಾವಳಗಿಯಲ್ಲಿ ಪ್ರೌಢಶಿಕ್ಷಣ, ಮುದ್ದೇಬಿಹಾಳದಲ್ಲಿ ಪಿಯುಸಿ ಹಾಗೂ ಬಿಎ ಪದವಿ ಪೂರ್ಣಗೊಳಿಸಿದರು. ಕರ್ನಾಟಕ ವಿ.ವಿ.ಯಿಂದ ಎಂ.ಎ ಪಡೆದರು. 1976ರಲ್ಲಿ ಭಾಷಾ ಶಾಸ್ತ್ರದಲ್ಲಿ ಡಿಪ್ಲೊಮ ಪದವಿ ಮುಗಿಸಿದರು. ಧಾರವಾಡದ ಮುರುಘಾಮಠವು ಇವರಿಗೆ ಧಾರ್ಮಿಕ -ಅಧ್ಯಾತ್ಮಿಕ ಶಿಕ್ಷಣ ನೀಡಿತು. 1995ರಲ್ಲಿ ಕಲಬುರ್ಗಿ ವಿಶ್ವ ವಿದ್ಯಾಲಯದಲ್ಲಿ ಪಿ. ಎಚ್. ಡಿ (1995) ಪದವಿ ಪಡೆದರು. ಕೆಲವು ವರುಷ ಕಾಲ ಆಲಮಟ್ಟಿ ಆಣೆಕಟ್ಟು ನಿಯಂತ್ರಣ ವಿಭಾಗದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು.ತದನಂತರ ಹುಮನಾಬಾದ ತಾಲೂಕಿನ ಬಸವತೀರ್ಥ ಚೆನ್ನಬಸವ ಸ್ವಾಮೀಜಿ ಕಲಾ ...
READ MORE