ಲೇಖಕ ಡಾ. ಚಿ.ಸಿ ನಿಂಗಣ್ಣ ಅವರ ಕೃತಿ-ಸಾವಿತ್ರಿಬಾಯಿ ಫುಲೆ. ವಿಚಾರವಾದಿ ಜ್ಯೋತಿಬಾ ಪುಲೆ ಸಮಾಜ ಪರಿವರ್ತನಾ ಕಾರ್ಯಕ್ಕೆ ತಮ್ಮ ಮಡದಿಗೆ ಶಿಕ್ಷಣ ಕೊಟ್ಟು ಶೂದ್ರಾತಿಶೂದ್ರರ ಮಕ್ಕಳಿಗೆ ಅದರಲ್ಲೂ ಬಾಲಕಿಯರಿಗಾಗಿ ಹಲವು ಶಾಲೆಗಳನ್ನು ಆರಂಭಿಸಿದರು. ಶಾಲೆಗೆ ಶಿಕ್ಷಕರು ಯಾರೂ ಬಾರದಿದ್ದಾಗ ಫುಲೆ ತಮ್ಮ ಮಡದಿ ಸಾವಿತ್ರಿ ಬಾಯಿ ಪುಲೆ ಗೆ ಪಾಠ ಹೇಳಿಕೊಡುವ ಮೂಲಕ ಶಿಕ್ಷಕ ಸೇವೆ ಮಾಡಲು ಮಾರ್ಗದರ್ಶನ ಮಾಡುತ್ತಾರೆ. ಫುಲೆ ಅವರ ಸಾಮಾಜಿಕ ಪರಿವರ್ತನಾ ಕಾರ್ಯಕ್ಕೆ ಶಿಕ್ಷಕಿ ಸಾವಿತ್ರಿಬಾಯಿ ಪುರೋಹಿತಶಾಹಿಗಳು ಕೊಡುವ ಅವಮಾನ ಸಂಕಟಗಳನ್ನು ಧೈರ್ಯದಿಂದ ಎದುರಿಸಿ ಅಕ್ಷರ ಕ್ರಾಂತಿ ಮಾಡಿದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ . ಶಿಕ್ಷಣದ ಮುಖಾಂತರ ಮಹಿಳೆಯರಲ್ಲಿ ತಮಗಾಗುವ ಅನ್ಯಾಯವನ್ನು ತಿಳಿಸಿಕೊಟ್ಟು ಮಹಿಳಾ ಸಬಲೀಕರಣಕ್ಕೆ ಜೀವನದುದ್ದಕ್ಕೂ ನಿಸ್ವಾರ್ಥ ಮನೋಭಾವದಿಂದ ಪರೋಪಕಾರಿ ಕಾರ್ಯ ಮಾಡಿದ ಮಹಾ ಮಾನವತಾವಾದಿ. ವಿಚಾರವಾದಿ, ಅಕ್ಷರದವ್ವ,ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ಅವರ ಶೈಕ್ಷಣಿಕ ಕೊಡುಗೆ ಅಪಾರ. ಇವರ ಜೀವನ ಚಿತ್ವರವೇ ಈ ಕೃತಿ.
ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...
READ MORE