‘ಸಾಧನಾಗಿರಿ ಅರುಣ್ ನಂದಗಿರಿ’ ಕೃತಿಯು ಈರಣ್ಣ ಬೆಂಗಾಲಿ ಅವರು ಬರೆದಿರುವ ಅರುಣ್ ನಂದಗಿರಿ ಅವರ ಜೀವನ-ವ್ಯಂಗ್ಯಚಿತ್ರಯಾನ ಕೃತಿಯಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ರಾಜಶ್ರೀ ಕಲ್ಲೂರಕರ್ ಅವರು, ಸಾಧನಗಿರಿ ಅರುಣ್ ನಂದಗಿರಿ ಕೃತಿಯಲ್ಲಿ ಈರಣ್ಣ ಬೆಂಗಾಲಿ ಎಷ್ಟು ಜೋಪನವಾಗಿ ಕಾಪಾಡಿಕೊಂಡು ಬಂದ ಅರುಣ್ ನ ವ್ಯಂಗ್ಯಚಿತ್ರಗಳು ಕಣ್ಣು ಹನಿಗೂಡಿಸಿವೆ. ಬಹುಶಃ ನಮ್ಮಿಂದ ಈ ಕೆಲಸವಾಗುತ್ತಿರಲಿಲ್ಲವೇನೋ. ಈ ಕೆಲಸ ಬೆಂಗಾಲಿಯೇ ಮಾಡಬೇಕೆಂದು ಅವನ ಆಸೆಯೇ ಏನೋ, ಅರುಣ್ ಗೆ ಖಂಡಿತ ಇದರಿಂದ ಖುಷಿ ಆಗುವುದಂತೂ ಸತ್ಯ. ಅರುಣ್ ಗೆ ಏನಾದರೂ ಬೈದಿದ್ದರೆ, ತಿದಿದ್ದರೆ ಅದು ನಾನು ಮತ್ತು ನನ್ನ ತಮ್ಮ ವೆಂಕಟೇಶ್. ವೆಂಕಟೇಶನಿಗೆ ಸರ್ಕಾರಿ ನ್ಯಾಯಾಧೀಶರ ಹುದ್ದೆ ದೊರೆತಾಗ ಅರುಣ್ ನನ್ನು ಕಾಳಜಿಪೂರ್ವಕವಾಗಿ ನೋಡಿಕೊಂಡವರು ನನ್ನ ತಮ್ಮಂದಿರಾದ ಮೋಹನ್ ಮತ್ತು ಜಗನ್ನಾಥ ನಂದಗಿರಿಯವರು. ಅರುಣ್ ನ ಉಪಯನದ ಪುಣ್ಯವನ್ನು ಮಾಡಿಸಿಕೊಂಡವರು ವೆಂಕಟೇಶ್ ಹಾಗೂ ಸುಧಾ ವೆಂಕಟೇಶ ಅವರು. ಅರುಣ್ ಗೆ ಮತ್ತೋರ್ವ ತಾಯಿ ದೊರೆತಳು ಎಂಬುದನ್ನು ಇಲ್ಲಿ ಲೇಖಕ ವಿಶ್ಲೇಷಿಸಿದ್ದಾರೆ.
ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...
READ MORE