ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರ ಕೃತಿ-ಶ್ರೀ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜರು.ಈ ಮಹಾರಾಜರ ಚರಿತ್ರೆ ಕುರಿತಂತೆ ಇಲ್ಲಿ ವಿವರವಾಗಿ ಬರೆಯಲಾಗಿದೆ . ಶ್ರೀ ಸದ್ಗುರು ಶ್ರೀಪತಾನಂದ ಮಹಾರಾಜರು ತಮ್ಮ ಜೀವಿತ ಕಾಲಾವಧಿಯಲ್ಲಿ ಅನೇಕ ಸಮಾಜಕಲ್ಯಾಣ ಕಾರ್ಯಗಳನ್ನು ಮಾಡಿದರು .ಜೊತೆಗೆ, ಅನೇಕ ಪವಾಡಗಳನ್ನು ಮಾಡಿ ಮೆರೆದವರು. ಇವರ ಈ ಮಂದಿರ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದಲ್ಲಿದೆ. ಪ್ರತಿವರ್ಷವೂ ಈ ಸಂಸ್ಥಾನದ ವತಿಯಿಂದ ಸದ್ಗುರುಗಳ ನಿರ್ವಾಣದ ದಿವಸ ಈ ಮಂದಿರದಲ್ಲಿ ಭಕ್ತಿ ಜಾತ್ರೆ ಉತ್ಸವಗಳು ನಡೆಯುತ್ತವೆ. ಸಾವಿರಾರು ಭಕ್ತರು ಕರ್ನಾಟಕ ಮಹಾರಾಷ್ಟ್ರ ದಿಂದ ಬಂದು ಈ ಉತ್ಸವಕ್ಕೆ ಪಾಲ್ಗೊಳ್ಳುತ್ತಾರೆ . ಇವರ ಚರಿತ್ರೆಯು ಅತ್ಯಂತ ಸುಂದರವಾಗಿದೆ. ಆಧ್ಯಾತ್ಮದ ನೆಲೆಯಲ್ಲಿ ಬಾಳಿದ್ದ ಶ್ರೀ ಗುರುಗಳು ತಮ್ಮ ಜೀವನವೆಲ್ಲಾ ಸಮಾಜಕ್ಕೆ ಮೀಸಲಾಗಿರಿಸಿದ್ದರು .
ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು. ಇವರ ಕಾವ್ಯನಾಮ ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ. ಕೊರೊನಾ ವೈರಸ್ ಪರಿಣಾಮ ಲಾಕ್ ...
READ MORE