ಲೇಖಖ ಡಾ. ನಾಗಪ್ಪ ಟಿ. ಗೋಗಿ ಅವರ ಕೃತಿ-ಬಂಡಾಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆ. ವೃತ್ತಿಯಿಂದ ಶಿಕ್ಷಕರು. ಆದರೆ, ರೈತಪರ ಚಳವಳಿಯಲ್ಲಿ ಹೋರಾಟಗಾರರು. ಪ್ರೊ. ನಂಜುಂಡಸ್ವಾಮಿ, ಸುಂದರೇಶ್, ಬಾಬಾಗೌಡ ಪಾಟೀಲ್ ಮುಂತಾದ ನಾಯಕರ ಒಡನಾಟದಿಂದ ಚಳವಳಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೈದ್ರಾಬಾದ್ ಕರ್ನಾಟಕ ಪ್ರದೇಶದ ನಾಯಕರನ್ನು ಪ್ರಶಂಸಿಸಿದ್ದರೆ, ರಾಜಕಾರಣಿಗಳನ್ನು ನೇರವಾಗಿ ಲಂಕೇಶ್ ಪತ್ರಿಕೆಯಲ್ಲಿ ಬರೆಯುವ ಎದೆಗಾರಿಕೆ ತೋರಿದ್ದರು. ಈ ರೀತಿಯ ಬರವಣಿಗೆಯನ್ನು ಲಂಕೇಶ್ ಪತ್ರಿಕೆಯ ಮೂಲಕವೇ ಸಾಕಾರಗೊಳಿಸಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಏಕೈಕ ಪತ್ರಕರ್ತ ಎಂದರೆ ಲಿಂಗಣ್ಣ ಸತ್ಯಂಪೇಟೆಯವರು. ಕೃತಿಗೆ ಬೆನ್ನುಡಿ ಬರೆದ ವಿಮರ್ಶಕ-ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ‘ಲಿಂಗಣ್ಣ ಸತ್ಯಂಪೇಟೆ ಅವರ ಬದುಕು-ಬರಹ-ಸಾಮಾಜಿಕ ಚಿಂತನೆ-ಹೋರಾಟ ಇತ್ಯಾದಿ ಮುಖಗಳನ್ನು ಪರಿಚಯಿಸಿದ ಕೀರ್ತಿ ನಾಗಪ್ಪ ಗೋಗಿ ಅವರಿಗೆ ಸಲ್ಲುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...
READ MORE