‘ತೆನಾಲಿ ರಾಮಕೃಷ್ಣ’ ಜೀವನಗಾಥೆಯ ಪುಸ್ತಕವನ್ನು ಲೇಖಕಿ ಟಿ. ಸುನಂದಮ್ಮ ರಚಿಸಿದ್ದಾರೆ. ವಿಜಯನಗರದ ಕೃಷ್ಣದೇವರಾಯನ ಆಸ್ಥಾನದ ಮಹಾ ವಿದ್ವಾಂಸರಲ್ಲಿ ಒಬ್ಬ, ಪ್ರಸಿದ್ಧ ಹಾಸ್ಯಗಾರ. ಬಹು ಕಷ್ಟಪಟ್ಟು ತನ್ನ ಪ್ರಯತ್ನದಿಂದಲೇ ವಿದ್ಯೆಯನ್ನು ಸಂಪಾದಿಸಿದ. ಅಹಂಕಾರ, ಮೂಢನಂಬಿಕೆ ಇವನ್ನು ಕತ್ತರಿಸುವ ಅಸ್ತ್ರವನ್ನಾಗಿ ಹಾಸ್ಯವನ್ನು ಬಳಸಿದ ತೆನಾಲಿ ರಾಮಕೃಷ್ಣ ನ ಜೀವನದ ವಿವಿಧ ಕಥೆಗಳನ್ನು ಈ ಪುಸ್ತಕವು ಒಳಗೊಂಡಿದೆ. ತೆನಾಲಿ ರಾಮಕೃಷ್ಣನ ಬುದ್ಧಿವಂತಿಕೆ, ಹಾಸ್ಯಪ್ರವೃತ್ತಿ, ಸಮಸ್ಯೆಗಳನ್ನು ಬಗೆಹರಿಸಿದ ರೀತಿ, ಜೀವನದ ವಿವಿಧ ಆಯಾಮಗಳನ್ನು ಈ ಪುಸ್ತಕದಲ್ಲಿ ಲೇಖಕಿ ಸುಂದರವಾಗಿ ಚಿತ್ರಿಸಿದ್ದಾರೆ.
ಹಾಸ್ಯ ಬರಹಗಾರ್ತಿ, ನಾಟಕಗಾರ್ತಿ ಸುನಂದಮ್ಮ ಟಿ, 1917 ಆಗಸ್ಟ್ 8 ರಂದು ಜನಿಸಿದರು. ತಂದೆ ರಾಮಯ್ಯ, ತಾಯಿ ನಾಗಮ್ಮ. ಇಂಟರ್ ಮಿಡಿಯಟ್ ವರೆಗೂ ಓದಿ ನಂತರ ಹಿಂದಿ ಅಭ್ಯಾಸ ಮಾಡಿದರು. ಹಾಸ್ಯ ನಿಯತಕಾಲಿಕೆ ಕೊರವಂಜಿಯಲ್ಲಿ ‘ನಾನ್ಕಾರಿಟ್ಟಿದ್ದು’ ಎಂಬ ನಗೆ ಲೇಖನದ ಮೂಲಕ ಹಾಸ್ಯ ಸಾಹಿತ್ಯ ಪ್ರಪಂಚವನ್ನು ಪ್ರವೇಶ ಮಾಡಿದ್ದು, ತಮ್ಮ ಕಲ್ಪನೆಯ ದಂಪತಿ ಮೈಲಾರಯ್ಯ-ಸರಸು ಮೂಲಕ ಕನ್ನಡದ ಓದುಗರನ್ನು ನಕ್ಕು ನಗಿಸಿ ವಿಡಂಬನೆಯ ಮೂಲಕ ತಿದ್ದಿದರು. ನಗೆ ಸಾಹಿತ್ಯವನ್ನು ಹೊರತುಪಡಿಸಿ ಅನೇಕ ರೇಡಿಯೋ ರೂಪಕಗಳನ್ನು ಬರೆದಿದ್ದಾರೆ. ಗೃಹಲಕ್ಷ್ಮಿ (1964), ಜಂಬದ ಚೀಲ (1971), ನನ್ನ ಅತ್ತೆಗಿರಿ (1980), ಮೂರು ಗೀತ ರೂಪಕಗಳು (1993), ಪೆಪರ್‌ಮೆಂಟ್, ಬಣ್ಣದ ...
READ MORE