ಭಾರತ ದೇಶ ಸ್ವಾತಂತ್ಯ್ರಕ್ಕಾಗಿ ಗಲ್ಲಿಗೇರಿದ ಹುತಾತ್ಮ ಭಗತ್ ಸಿಂಗ್ ಅವರ ಜೀವನ ಚರಿತ್ರೆ ಕುರಿತಂತೆ ಲೇಖಕ ಡಾ. ಸಿ. ಚಂದ್ರಪ್ಪ ಅವರು ಬರೆದ ಕೃತಿ-ಭಗತ್ ಸಿಂಗ್: ಹುತಾತ್ಮ ರಾಜಕುಮಾರ. ಮೂಲತಃ ಪಂಜಾಬ ರಾಜ್ಯದ ಭಗತ್ ಸಿಂಗ್ ಅವರು ಚಂದ್ರಶೇಖರ ಆಜಾದ್ ಹಾಗೂ ರಾಜಗುರು ಸುಖದೇವ ಮೂವರು ಜೈಲಿನಲ್ಲಿದ್ದು, ಒಂದೇ ದಿನ (1931 ಮಾರ್ಚ್ 23) ಗಲ್ಲಿಗೇರಿಸಲಾಯಿತು. ಬ್ರಿಟಿಷ್ ಆಡಳಿತದ ದಮನಕಾರಿ ನೀತಿ ವಿರೋಧಿಸಿದ್ದು ಅವರ ಮೇಲಿನ ಪ್ರಮುಖ ಆರೋಪವಾಗಿತ್ತು. ಜೈಲಿನಲ್ಲಿರುವಾಗಲೇ ಅವರು ಅಧ್ಯಯನಶೀಲರಾಗಿದ್ದರು. ಹತ್ತು ಹಲವು ವಿಚಾರಗಳನ್ನು ಮಂಡಿಸುತ್ತಿದ್ದರು. ಪ್ರಖರವಾದ ವಿಚಾರಗಳು ಮಾತ್ರ ಜೀವನದ ಅರ್ಥಪೂರ್ಣತೆ ಹೆಚ್ಚಿಸುತ್ತವೆ ಎಂಬುದು ಅವರ ದೃಢನಂಬಿಕೆ. ಈ ಹಿನ್ನೆಲೆಯಲ್ಲಿ, ಭಾರತದಲ್ಲಿಯ ಬಹುತೇಕ ಜನರು, ಆಡಳಿತಾರೂಢ ಅರಸರು ಗುಲಾಮಿ ವಿಚಾರಗಳನ್ನು ಹೊಂದಿರುವುದರ ಕುರಿತು ಅವರಲ್ಲಿ ಆಕ್ರೋಶವಿತ್ತು. ಇಂತಹ ಹಲವು ವಿಚಾರಗಳನ್ನು ಒಳಗೊಂಡಿರುವ ಕೃತಿ ಇದು.
ಲೇಖಕ, ಚಿಂತಕ ಡಾ. ಸಿ. ಚಂದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿ ಮಸಲವಾಡ ಗ್ರಾಮದವರು. 1993ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ದೊಂದಿಗೆ ಚಿನ್ನದ ಪದಕ ಪಡೆದರು. ಯುಜಿಸಿ ಫೆಲೋಷಿಪ್ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ (2001) ಪಿಎಚ್.ಡಿ .ಪಡೆದರು. 1996ರಲ್ಲಿ, ಚಿತ್ರದುರ್ಗದ ಸರ್ಕಾರದ ಕಾಲೇಜು ಉಪನ್ಯಾಸಕರಾಗಿ, ನಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಕೇಂದ್ರ ಸಂಯೋಜಕ, ಸಹ ಪ್ರಾಧ್ಯಾಪಕರಾದರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರ್ತೂರಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು. Urbanisation & Industrialisation in Karnataka, History and ...
READ MORE