‘ಎಂ.ವೈ. ಘೋರ್ಪಡೆ ನಾನು ಕಂಡಂತೆ’ ಕೃತಿಯು ಭಾರತೀ ಕಾಸರಗೋಡು ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಕೆಲವು ವ್ಯಕ್ತಿತ್ವಗಳನ್ನು ಮರೆಯಲಾಗುವುದಿಲ್ಲ. ಅವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದು ಜನಾದರಣೀಯ ಕಾರ್ಯಕ್ರಮಗಳಿಂದ ಹೆಸರು ಗಳಿಸಿದ್ದ ಅವರದ್ದು ಸ್ಮರಣೀಯ ಬದುಕು. ಇಲ್ಲಿ ಲೇಖಕರು ಅವರ ವ್ಯಕ್ತಿತ್ವವನ್ನು ಸುಲಲಿತವಾಗಿ ತಮ್ಮದೇ ಶೈಲಿಯಲ್ಲಿ ಪರಿಚಯಿಸಿದ್ದಾರೆ. ರಾಜಕಾರಣದಲ್ಲಿ ಇವರಂತಹ ನಿಸ್ಸೀಮ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತಹ ಚಾರಿತ್ಯ್ರದಂತೆ ಇಲ್ಲಿ ಅವರನ್ನು ಕಟ್ಟಿಕೊಡಲಾಗಿದೆ.
ಕನ್ನಡ ಬರಹಗಾರ್ತಿ ಭಾರತೀ ಕಾಸರಗೋಡು ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಮೊದಲನೆಯ ಕೃತಿ ವೀಣೆಯ ನೆರಳಲ್ಲಿ, ಡಾ. ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನವನ್ನು ಕುರಿತದ್ದು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಬಹುಮಾನಗಳು ದಕ್ಕಿವೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಭಾರತಿಯವರ ಇತರ ಪ್ರಕಟಿತ ಪುಸ್ತಕಗಳು ಚಂದನ (ಪ್ರಬಂಧ ಸಂಕಲನ), ರಾಸದರ್ಶನ (ತಂದೆ ಶ್ರೀ ಸಮೇತನಹಳ್ಳಿ ರಾಮರಾಯರಿಗೆ ಅರ್ಪಿಸಿದ ಅಭಿನಂದನ ಗ್ರಂಥ), ಜೀವಿ: ಜೀವ--ಭಾವ (ವಿದ್ವಾಂಸ ಶ್ರೀ ಜಿ. ವೆಂಕಟಸುಬ್ಬಯ್ಯ ಅವರ ಸಂಕ್ಷಿಪ್ತ ಜೀವನ ಚರಿತ್ರೆ), ಮತ್ತು ಬಂಧಬಂಧುರ (ಸಂಪಾದಿತ ...
READ MORE(ವಿಮರ್ಶೆ, ಎಂ.ವೈ. ಘೋರ್ಪಡೆ. ಜೂನ್, 2023 ಹೊಸತು)
ಎಂ ವೈ ಘೋರ್ಪಡೆ – ಹೌದು, ಕೆಲವು ವ್ಯಕ್ತಿಗಳನ್ನು ಮರೆಯಲಾಗುವುದೇ ಇಲ್ಲ. ಅವರ ವ್ಯಕ್ತಿತ್ವವೇ ಹಾಗಿರುತ್ತದೆ. ತೆಂಗಿನ ಮರದಂತೆ – ಸಂಪಿಗೆ ಮರದಂತೆ - ಆಲದಂತೆ ಸಾರ್ಥಕ ಬದುಕು ಎನ್ನುತ್ತಾರಲ್ಲ. ಹಾಗೆ ನಾವೂ ಎತ್ತರಕ್ಕೆ ಬೆಳೆದು ಇತರರಿಗೂ ನೆರಳು ನೀಡಿ, ಸುಗಂಧ ಪಸರಿಸಿ, ಫಲ-ಪುಷ್ಪ ಸಿಗುವಂತೆ ಬಾಳಿದ ಮಹನೀಯರು. ನಮ್ಮ ಮಧ್ಯೆ ಕೆಲವೇ ಜನರಿರುತ್ತಾರೆ. ತಾವಳಿದರೂ ಇತರರು ನೆನಪಿಸಿಕೊಳ್ಳುವಂತಹ ಬಾಳ್ವೆ ಅವರದು. ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದು ಜನಾದರಣೀಯ ಕಾರ್ಯಕ್ರಮಗಳಿಂದ ಹೆಸರು ಗಳಿಸಿದ ಶ್ರೀ ಎಂ. ವೈ. ಘೋರ್ಪಡೆ ಅವರದು ಅಂತಹ ಸ್ಮರಣೀಯ ಬದುಕು ಸಾಹಿತ್ಯಕ ಕಾರಣಗಳಿಗಾಗಿ ಅವರನ್ನು ಹತ್ತಿರದಿಂದ ಕಾಣುವ ಅವಕಾಶವೊಂದು ಒದಗಿಬಂದು; ಅವರ ಘನತೆಯನ್ನು ಅರಿತ ಶ್ರೀಮತಿ ಭಾರತೀ ಕಾಸರಗೋಡು ಅವರಿಗೆ ಘೋರ್ಪಡೆ ಬಗ್ಗೆ ಒಂದು ಪ್ರಸ್ತಕ ಬರೆಯದಿರಲು ಸಾಧ್ಯವಾಗಲೇ ಇಲ್ಲ. ಬರೆಯದಿದ್ದರೆ ಅದು ದೊಡ್ಡ ಕೊರತೆಯೆಂದು ಭಾವಿಸಿ ತಾನು ಕಂಡಂತೆ ಅವರ ವ್ಯಕ್ತಿತ್ವವನ್ನು ತಮ್ಮ ಎಂದಿನ ಸುಲಲಿತ ಶೈಲಿಯಲ್ಲಿ ನಮಗೂ ಪರಿಚಯಿಸಿದ್ದಾರೆ. ಇಂದಿನ ರಾಜಕಾರಣದಲ್ಲಿ ಇವರಂತಹ ನಿನ್ನ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬಂತಹ ಚಾರಿತ್ರ್ಯ ಇವರದೆಂದು ನಾವಿಲ್ಲಿ ಮನಗಾಣಬಹುದು