“ಆಧುನಿಕ ಸಾಹಿತ್ಯದಲ್ಲಿ ಬಸವಣ್ಣ' ಡಾ. ಮಲ್ಲಿಕಾರ್ಜುನ ಜೆ, ಅಮ್ಣೆ ಅವರ ಸಂಶೋಧನ ಪ್ರಬಂಧ. ಬಸವಣ್ಣನನ್ನು ಕೇಂದ್ರವಾಗಿಟ್ಟುಕೊಂಡು ಎಂ.ಫಿಲ್, ನಂತರ ಪಿಎಚ್.ಡಿ. ಅಧ್ಯಯನ ಪೂರೈಸಿದ್ದಾರೆ.
ಪ್ರಸ್ತುತ ಅಧ್ಯಯನದ ಮೂಲಕ ಬಸವಣ್ಣನ ಬದುಕಿನ ಹಲವು ಮಜಲುಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಗುರುತಿಸಲು ಸಂಶೋಧಕರಿಗೆ ಸಾಧ್ಯವಾಗಿದೆ. ಬಸವಣ್ಣನ ವಿಷಯದಲ್ಲಿ ಲೇಖಕರು ಹಲವು ದ್ವಂದ್ವಗಳನ್ನು ಎತ್ತಿ ತೋರಿಸಿದ್ದಾರೆ. ಈ ಅಧ್ಯಯನವು ಬಸವಣ್ಣನ ಸಮಗ್ರ ವ್ಯಕ್ತಿತ್ವ ಹಾಗೂ ಸಾಮಾಜಿಕ ಹೋರಾಟ ಕುರಿತಾಗಿ ಹೊಸ ಬೆಳಕನ್ನು ಬೀರಲು ಯತ್ನಿಸಿದೆ.