‘ಎಸ್. ಜಿ. ವಾಸುದೇವ್’ ಕಲಾವಿದ ಎಸ್.ಜಿ. ವಾಸುದೇವ್ ಅವರ ಬದುಕು ಬರಹಗಳ ಮೇಲೆ ಬೆಳಕು ಚಿಲ್ಲುವ ಕೃತಿ. ಲೇಖಕ ಕೆ.ವಿ. ಸುಬ್ರಹ್ಮಣ್ಯಂ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸಮಕಾಲೀನ ಕಲಾರಂಗಕ್ಕೆ ಅನನ್ಯ ರೂಪ ಕಲ್ಪನೆಯನ್ನು ಕೊಡುಗೆಯಾಗಿ ಕಲಾ ಕೃತಿಗಳಲ್ಲಿ ಎಸ್. ಜಿ. ವಾಸುದೇವರವರ 'ವೃಕ್ಷ' ಕೃತಿ ಸರಣಿ ಬಹುಮುಖ್ಯವಾದದ್ದು. ಈ 'ವೃಕ್ಷ' ದ ಸಂಕೀರ್ಣವೈವಿಧ್ಯಮಯ, ವಿಶಿಷ್ಟ ರೂಪಕಲ್ಪನಾವಿಲಾಸದಲ್ಲಿ ಅವರು ವಿಹರಿಸಿದ ರೀತಿಯೂ ಆಪೂರ್ವ, ಭಾರತೀಯ ಜೀವಧ್ವನಿಯ, ಜೀವನೋತ್ಸಾಹದ ಬದುಕಿನ ಅನುಭವವನ್ನು ತಂದು ಕೊಡುತ್ತಾರೆ. ಈ ವೃಕ್ಷ' ಪುರಾಣಗಳ ಕಲ್ಪವೃಕ್ಷ'ವಾಗಿಯೂ ಕಾಣಿಸಿಕೊಂಡಿತು. ಬದುಕಿನ ವೃಕ್ಷ' ಎಂಬ ರಂಗ ಭೂಮಿಯಲ್ಲಿ ಕಲಾವಿದನ ಎಲ್ಲ ಗ್ರಹಿಕೆಗಳೂ ವೈವಿಧ್ಯ, ಕೆಲವೊಮ್ಮೆ ವೈರುಧ್ಯಗಳಿಂದ ಕಾಣಿಸಿಕೊಂಡಿವೆ.
ತಮ್ಮ ರೇಖೆ, ಬಣ್ಣ, ರೂಪಗಳಲ್ಲಿ ಚಿಂತನೆಯ ಫಲದಂತೆ. ಇಂದಿನ ಗ್ರಾಮೀಣ ಬದಾಕಿನ ರಮ್ಯ ಒಳನೋಟಗಳನ್ನೂ ಇತ್ತೀಚಿನ ಥಿಯೇಟರ್ ಆಫ್ ಲೈಫ್' ಕಲಾಕೃತಿಗಳಲ್ಲಿ ಅಲಂಕರಣ' ಹಾಗೂ 'ಕಲೆ'ಗಳ ಉಪಯುಕ್ತ ಕಸಿಯತ್ತಲೂ ಗಮನ ನೀಡಿ ಅಭಿವ್ಯಕ್ತಿಸಿರುವ ವಾಸುದೇವ ನಮ್ಮ ಸಾಂಸ್ಕೃತಿಕ ರಂಗದ ಪ್ರಮುಖರಲ್ಲಿ ಒಬ್ಬರಾಗಿ, ಅಭಿವ್ಯಕ್ತಿಯ ಅನನ್ಯತೆಯಿಂದ ಪ್ರಭಾವಶಾಲಿ ಕಲಾವಿದರಾಗಿದ್ದಾರೆ. ಅವರ ಕಲಾಬದುಕಿನ ಅನಾವರಣ ಈ ಕೃತಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಾಗಟ ಅಗ್ರಹಾರದವರಾದ ಕೆ.ವಿ. ಸುಬ್ರಹ್ಮಣ್ಯಂ (ಜನನ: 18-12-1949) ಅವರು ದೃಶ್ಯಕಲೆಯ ಇತಿಹಾಸ- ವಿಮರ್ಶೆಗಳಿಗೆ ಸಂಬಂಧಿಸಿದ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡವರು. ಕರ್ನಾಟಕದ ಆಧುನಿಕ ಶಿಲ್ಪಕಲೆ (1994), ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ (2007), ಕೆ. ವೆಂಕಟಪ್ಪ ಪುನರಾಲೋಕನ, ಇನ್ ಸ್ಟಾಲೇಷನ್ ಕಲಾ ಪ್ರಪಂಚ ಅವರ ಕೃತಿಗಳು. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ದೃಶ್ಯಕಲಾ ವಿಮರ್ಶೆ ಹಾಗೂ ಲೇಖನಗಳನ್ನು ಪ್ರಕಟಿಸಿರುವ ಅವರು ಸುಮಾರು ನಾಲ್ಕು ದಶಕಗಳ ಕಾಲ ಸತತವಾಗಿ ವಿಮರ್ಶೆ ಬರೆಯುತ್ತ ಬಂದಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ (1999), ಚೆನ್ನೈನ ಯುನೈಟೆಡ್ ರೈಟರ್ಸ್ ...
READ MORE