ಮಹಾಸಂನ್ಯಾಸಿ

Author : ಪದ್ಮಾ ಶೆಣೈ

₹ 80.00




Year of Publication: 1972
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼಮಹಾಸಂನ್ಯಾಸಿʼ ಜೀವನಚರಿತ್ರೆಯು ಶ್ರೀ ಶಂಕರಾಚಾರ್ಯರ ಕುರಿತಾಗಿದ್ದು, ಈ ಪುಸ್ತಕವನ್ನು ಲೇಖಕಿ ಪದ್ಮಾ ಶೆಣೈ ರಚಿಸಿದ್ದಾರೆ. ವೇದ- ವೇದಾಂಗ ಪಾರಂಗತರಾಗಿದ್ದ ಶ್ರೀ ಶಂಕರಾಚಾರ್ಯರು ಉದಾತ್ತ ಆದರ್ಶಗಳಿಂದ ಪ್ರೇರಿತರಾಗಿದ್ದವರು. ಭಾರತದ ಜನಕೋಟಿಯ ಹೃದಯದಲ್ಲಿ ಧರ್ಮ ಜಾಗೃತಿಯನ್ನು ತಂದ ವಿಭೂತಿ ಪುರುಷರು, ಶ್ರೀ ಶಂಕರಾಚಾರ್ಯರ ಜೀವಿತಕಾಲದ ಘಟನೆಗಳ ಅನಾವರಣ ಈ ಪುಸ್ತಕದ ಒಳಹೂರಣ. ಸಮಾಜಕ್ಕೆ ಉತ್ತಮ ಸಂದೇಶಗಳ ಜೊತೆಗೆ ಪ್ರೇರಣಾತ್ಮಕ ಮಾತುಗಳಲ್ಲಿ ಆದರ್ಶಗಳನ್ನು ತುಂಬಿದ ಶಂಕರಾಚಾರ್ಯರ ಜೀವನದ ಆಗು-ಹೋಗುಗಳನ್ನು ಈ ಕೃತಿಯಲ್ಲಿ ನವಿರಾಗಿ ಚಿತ್ರಿಸಲಾಗಿದೆ.

About the Author

ಪದ್ಮಾ ಶೆಣೈ
(03 November 1933 - 24 March 2020)

ಚಿಂತನ, ಕಥೆ, ಕಾದಂಬರಿ, ಲೇಖನ, ಪ್ರಬಂಧ ಮುಂತಾದ ವೈವಿಧ್ಯಮಯ ಪ್ರಕಾರಗಳಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಪದ್ಮಾ ಶೆಣೈಅವರು 1933 ನವೆಂಬರ್‌ 03 ರಂದು ಚೆನ್ನೈನಲ್ಲಿ ಜನಿಸಿದರು. ಮನುಷ್ಯರು ಬೆಳೆಸಿಕೊಂಡಿರುವ ಸಂಸ್ತೃತಿ, ನಂಬಿಕೆ, ಬದಲಾಗುತ್ತಿರುವ ಜೀವನ ಮೌಲ್ಯಗಳು, ಸಂಘರ್ಷ, ಮಾನಸಿಕ ದ್ವಂದ್ವಗಳು ಇವುಗಳನ್ನೇ ತಮ್ಮ ಕಥಾವಸ್ತುವಿನಲ್ಲಿ  ಆರಿಸಿಕೊಂಡು ಜನಪ್ರಿಯ ಲೇಖಕಿ ಎನಿಸಿದ್ದಾರೆ ಪದ್ಮಾ ಶೆಣೈ. ತಂದೆಯಿಂದಲೇ ಎಳೆ ವಯಸ್ಸಿನಲ್ಲಿಯೇ ‘ಗಾಸ್ಪೆಲ್ ಆಫ್ ರಾಮಕೃಷ್ಣ’ ಓದಿದ್ದರ ಜೊತೆಗೆ ತಂದೆಯ ಸಂಗ್ರಹದಲ್ಲಿದ್ದ ಇಂಗ್ಲಿಷ್ ಲೇಖಕರಾದ ಡೇಲ್ ಕಾರ್ನಿಜ್, ಜಿಮ್ ಕಾರ್ಬೆಟ್ ಮುಂತಾದವರ ಕೃತಿಗಳನ್ನಲ್ಲದೆ ರವೀಂದ್ರನಾಥ ಠಾಕೂರ್, ಬಂಕಿಮ ಚಂದ್ರ ಚಟರ್ಜಿ, ...

READ MORE

Related Books